More

    ಲವ್ ಮಾಕ್​ಟೇಲ್​ನ ನಿಧಿಮಾ ಪಾತ್ರ ಸೃಷ್ಟಿಯಾಗಲು ಕಾರಣ ಇವರೇ!; ಕುತೂಹಲ ಬಿಚ್ಚಿಟ್ಟ ಡಾರ್ಲಿಂಗ್ ಕೃಷ್ಣ

    ಬೆಂಗಳೂರು: ‘ಲವ್​ ಮಾಕ್​ಟೇಲ್’ ಈ ವರ್ಷದ ಸೂಪರ್​ ಹಿಟ್​ ಸಿನಿಮಾ. ನಿಧಿಮಾ ಮತ್ತು ಆದಿ ಜೋಡಿ ಅಷ್ಟೇ ಮುದ್ದಾಗಿಯೇ ಕಾಣಿಸಿಕೊಂಡು ಕರುನಾಡಿಗರ ಜತೆಗೆ ಪಕ್ಕದ ಟಾಲಿವುಡ್​ ಮಂದಿಗೂ ಇಷ್ಟವಾಗಿತ್ತು. ಇದೀಗ ಇದೇ ಚಿತ್ರದ ನಿಧಿಮಾ ಪಾತ್ರದ ಬಗ್ಗೆ ನಾಯಕ, ನಿರ್ದೇಶಕ ಡಾರ್ಲಿಂಗ್​ ಕೃಷ್ಣ ಹೇಳಿಕೊಂಡಿದ್ದಾರೆ.
    ಹೌದು, ನಿಧಿಮಾ ಪಾತ್ರಕ್ಕೆ ಸ್ಫೂರ್ತಿಯಾಗಿದ್ದು ಬೇರಾರು ಅಲ್ಲ, ನಟಿ ಮಿಲನಾ ನಾಗರಾಜ್​. ಅವರನ್ನು ಗಮನದಲ್ಲಿಟ್ಟುಕೊಂಡೇ ಪಾತ್ರವನ್ನು ಬರೆದಿದ್ದಾರಂತೆ ಕೃಷ್ಣ. ಅಷ್ಟಕ್ಕೂ ಹೀಗೆ ಹೇಳಿಕೊಳ್ಳಲು ಕಾರಣವಾಗಿದ್ದು, ಮಿಲನಾ ಜನ್ಮದಿನ. ಇಂದು ಮಿಲನಾ ಬರ್ತಡೇ. ಅವರಿಗೆ ಶುಭ ಕೋರುವ ನೆಪದಲ್ಲಿ ಪಾತ್ರ ಸೃಷ್ಟಿಯ ಹಿಂದಿನ ಅಸಲಿಯತ್ತನ್ನು ಹೇಳಿಕೊಂಡಿದ್ದಾರೆ.
    ‘ನಿನ್ನ ಪ್ರೀತಿ ಪರಿಶುದ್ಧ, ನಿನ್ನ ಹೃದಯ, ನಿನ್ನ ನಗುವೂ ಅಷ್ಟೇ ಪರಿಶುದ್ಧ.. ನಿನ್ನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ನಿಜವಾದ ಹ್ಯಾಪಿನೆಸ್​ ಏನೆಂಬುದನ್ನು ನೀನು ತೋರಿಸಿದ್ದೀಯಾ. ಈ ನಿನ್ನ ಗುಣಗಳೇ ನಿಧಿಮಾ ಪಾತ್ರ ಸೃಷ್ಟಿಗೆ ಸ್ಫೂರ್ತಿ. ಹ್ಯಾಪಿ ಬರ್ತಡೇ ಮಿಲನಾ ’ ಎಂದಿರುವ ಕೃಷ್ಣ, ನಿಧಿಮಾ ಬರಿ ಹೊಡೆಯುತ್ತಿದ್ದಳು, ಆದರೆ, ಮಿಲನಾ ನನ್ನನ್ನೇ ಕಾಲಡಿ ಹಾಕಿ ತುಳಿಯುತ್ತಾಳೆ’ ಎಂದೂ ಕಿಚಾಯಿಸಿದ್ದಾರೆ.
    ಸದ್ಯ ಈ ಜೋಡಿ ಲವ್​ ಮಾಕ್​ಟೇಲ್​ ಸೀಕ್ವೆಲ್​ನಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಸ್ಕ್ರಿಪ್ಟಿಂಗ್​ ಕೆಲಸ ಶುರುವಾಗಿದ್ದು, ಲಾಕ್​ಡೌನ್​ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆಯಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts