

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರನ್ನು ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ. ದರ್ಶನ್ ಈ ರೀತಿಯ ಕೃತ್ಯ ಮಾಡಿಲ್ಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ತಪ್ಪು ನಡೆದಿದ್ದರೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ.
ಇನ್ನೂ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಪತ್ನಿ, ಮಗ, ಅಕ್ಕ, ಬಾವ, ಅಕ್ಕನ ಮಗ ಸೇರಿದಂತೆ ರಕ್ಷಿತಾ ಪ್ರೇಮ್, ನಟ ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರು ಭೇಟಿ ನೀಡುತ್ತಿದ್ದಾರೆ. ಈಗ ನಟ ಧನ್ವೀರ್ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ ಭೇಟಿಯಾಗಿದ್ದಾರೆ. ಬಳಿಕ ‘ಕೈವ’ ನಟ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ನನಗೆ ಯಾವಾಗಲೂ ಅಣ್ಣ ಅಂತಾನೇ ಹೇಳ್ತೀನಿ. ಅವರ ಅಭಿಮಾನಿಗಳು ಯಾರು ಆತಂಕಕ್ಕೆ ಒಳಗಾಗಬಾರದು. ನಾನು ಎಲ್ಲಿಯೂ ಕೂಡ ಮಾತನಾಡುತ್ತಿಲ್ಲ ಅಂತ ಎಲ್ಲರೂ ಹೇಳ್ತಿದ್ದರು. ಆದರೆ ಇದು ಮಾತನಾಡುವ ಸಂದರ್ಭವಲ್ಲ. ತನಿಖೆ ನಡೆಯುತ್ತಿರುವ ವೇಳೆ, ನಾವು ಮಾತನಾಡುವುದರಿಂದ ಎಲ್ಲವೂ ಸರಿ ಹೋಗೋದಿಲ್ಲ ಅಂತ ಗೊತ್ತಿತ್ತು ಎಂದು ಧನ್ವೀರ್ ಗೌಡ ಹೇಳಿದ್ದಾರೆ.
ದರ್ಶನ್ ಅವರಿಗೆ ಅಭಿಮಾನಿಗಳ ಮೇಲಿನ ಕಾಳಜಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಅದೇ ಹಳೆಯ ದರ್ಶನ್ ನಾವು ನೋಡಿದ್ದೇವೆ. ಯಾರೂ ಕುಗ್ಗುವಂತಹ ಪ್ರಶ್ನೆ ಇಲ್ಲ ಅದೇ ಜೋಶ್ನಲ್ಲಿ ಇದ್ದಾರೆ ಎಂದು ಹೇಳಿದರು.
ಎಂದಿಗೂ ಕೂಡ ದರ್ಶನ್ ಅಣ್ಣನನ್ನು ನಾನು ಅಣ್ಣ ಅಂತ ಹೇಳಲು ಹೆದರಿಕೆಯಿಲ್ಲ ಹಿಂಜರಿಯೋದಿಲ್ಲ ಎಂದಿದ್ದಾರೆ. ತಪ್ಪು ಮಾಡಿದ್ದರೆ ದರ್ಶನ್ ಅವರಿಗೆ ಶಿಕ್ಷೆಯಾಗಲಿ. ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆರಾಮವಾಗಿ ಇರಿ ಸಿನಿಮಾ ಶೂಟಿಂಗ್ ಆರಂಭ ಮಾಡಿ ಅಂದ್ರು. ಆದ್ರೆ ನಮಗೆ ಬೇಜಾರು ಇದೆ. ನಾವು ಜೈಲಿನಲ್ಲಿ ನೋಡ್ತಿವಿ ಅಂತಾ ನಿರೀಕ್ಷೆ ಮಾಡಿರಲಿಲ್ಲ. ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಎಲ್ಲಾ ಅಭಿಮಾನಿಗಳು ಆರಾಮವಾಗಿ ಇರಿ ಚಾಮುಂಡೇಶ್ವರಿ ತಾಯಿ ಒಳ್ಳೆಯದು ಮಾಡ್ತಾಳೆ ಅಂತ ಹೇಳಿಕೊಂಡಿದ್ದಾರೆ.