

ಬೆಂಗಳೂರು: ( Darshan ) ರೆಬೆಲ್ ಸ್ಟಾರ್ ಅಂಬರೀಶ್ ಅವರ ಬರ್ತ್ಡೇ ದಿನ ನಟ ದರ್ಶನ್ ಪ್ರೀತಿಯ ಅಂಬಿಗೆ ವಿಶ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಸ್ಟ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್ ಸ್ಟಾರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಂಬರೀಶ್ ಕುಟುಂಬದ ಮನೆ ಮಗನೆಂದೇ ಗುರುತಿಸಿಕೊಂಡಿದ್ದರು ದರ್ಶನ್. ಆದರೆ ರೇಣುಕಾ ಸ್ವಾಮಿ ಪ್ರಕರಣದ ಬಳಿಕ ದರ್ಶನ್ ಹಾಗೂ ಸುಮಲತಾ ನಡುವೆ ಭಿನ್ನಾಭಿಪ್ರಾಯ ಮೂಡಿದಂತಿದೆ. ಭಿನ್ನಾಭಿಪ್ರಾಯದ ನಡುವೆಯೂ ಸಹ ನಟ ದರ್ಶನ್, ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಸಂದೇಶ ಹಂಚಿಕೊಂಡಿದ್ದಾರೆ.
ಅಂಬರೀಶ್ ಹಾಗೂ ದರ್ಶನ್ ಪರಸ್ಪರ ಬಹಳ ಆತ್ಮೀಯರಾಗಿದ್ದರು. ದರ್ಶನ್ ಹಾಗೂ ಅಂಬರೀಶ್ ಕೆಲವಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.