PHOTO: ಕೊಳ್ಳೇಗಾಲದ ಮಲೆಮಹದೇಶ್ವರ ಅರಣ್ಯದಲ್ಲಿ ದರ್ಶನ್​, ಚಿಕ್ಕಣ್ಣ...

collage (11)
Published on

ಸಿನಿಮಾದ ಜತೆಗೆ ಅರಣ್ಯ ರಕ್ಷಣೆ, ಪ್ರಾಣಿ ಪೋಷಣೆ ಪಾಲನೆ ಬಗ್ಗೆ ನಟ ದರ್ಶನ್​ಗೆ ವಿಶೇಷ ಪ್ರೀತಿ, ಅದೇ ರೀತಿ ಹಾಸ್ಯ ನಟ ಚಿಕ್ಕಣ್ಣ ಸಹ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದು ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಮತ್ತೆ ಈ ಜೋಡಿ ಕಾಡಿನಲ್ಲಿ ಬೀಡು ಬಿಟ್ಟಿದೆ.

ಭಾನುವಾರ ದರ್ಶನ್​ ಮತ್ತು ಚಿಕ್ಕಣ್ಣ ಮಲೆಮಹದೇಶ್ವರ ವನ್ಯಧಾಮದಲ್ಲಿ ಸಂಚರಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಬರೀ ಸುತ್ತಾಡದೆ, ಒಂದಷ್ಟು ಸಸಿಗಳನ್ನು ನೆಟ್ಟಿದ್ದಾರೆ. ಕೊಳ್ಳೇಗಾಲದ ಬಫರ್​ ವಲಯದಲ್ಲಿನ ದೊಡ್ಡಮಾಕಳಿಗಿ ವ್ಯಾಪ್ತಿಯಲ್ಲಿನ ಶಿಬಿರಕ್ಕೆ ಭೇಟಿ ನೀಡಿ ವಾಚರ್​ಗಳನ್ನು ಭೇಟಿ ಮಾಡಿದೆ. ಅಂದಹಾಗೆ ಅರಣ್ಯ ಇಲಾಖೆಯ  ಹಸಿರು ಕರ್ನಾಟಕ ಯೋಜನೆಯ ರಾಯಭಾರಿಯಾಗಿರುವ ದರ್ಶನ್, ಈ ಹಿಂದೆಯೂ ಹಲವು ಬಾರಿ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದ ದರ್ಶನ್​ ಫೋಟೋಗ್ರಫಿ ಮಾಡಿದ್ದರು.

ಇದೀಗ ಚಿಕ್ಕಣ್ಣ ಮತ್ತು ರಾಬರ್ಟ್​ ನಿರ್ದೇಶಕ ಉಮಾಪತಿ ಶ್ರೀನಿವಾಸ್​ ಜತೆ ಸೇರಿ ಮಲೆಮಹದೇಶ್ವರ ವನ್ಯಧಾಮದ ಡಿಎಫ್ಒ ಕಚೇರಿ ಬಳಿ ಗಿಡ ನೆಟ್ಟು, ಕೃಷಿ ಅರಣ್ಯ ಸಪ್ತಾಹಕ್ಕೆ ಚಾಲನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net