ಬಳ್ಳಾರಿ ಜೈಲಿಗೆ ನಾಳೆ ನಟ ದರ್ಶನ್ ತೂಗದೀಪ, ಸಂಚಾರ ಮಾರ್ಗ ವಿವರ ಹೀಗಿದೆ…

darshan

ಬೆಂಗಳೂರು: ವಿಶೇಷ ಆತಿಥ್ಯ ಹಿನ್ನೆಲೆ ನಟ ದರ್ಶನ್​ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗುತ್ತಿದೆ. ಉಳಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನು ಕೂಡ ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ನಿಜ! ಜಿ ಪರಮೇಶ್ವರ್ ಅಚ್ಚರಿಕೆ ಹೇಳಿಕೆ

ನಟ ದರ್ಶನ್‌ ಮತ್ತು ಇತರೆ ಕೆಲವರಿಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಭಾನುವಾರವಷ್ಟೇ ಬಯಲಾಗಿತ್ತು. ಇದರಿಂದ ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಅಧಿಕಾರಿಗಳು ದರ್ಶನ್‌ರನ್ನು ನ್ಯಾಯಾಲದ ಆದೇಶದಂತೆ ನಾಳೆ (ಆಗಸ್ಟ್ 29) ರಂದು ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗುತ್ತದೆ.

ಬಳ್ಳಾರಿ ಜೈಲಿಗೆ ನಾಳೆ ನಟ ದರ್ಶನ್ ತೂಗದೀಪ, ಸಂಚಾರ ಮಾರ್ಗ ವಿವರ ಹೀಗಿದೆ…

ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಸಿಕ್ಕ ಪ್ರಕರಣದ ಬಗ್ಗೆ ಎಫ್​ಐಆರ್ ದಾಖಲಾಗಿದ್ದು, ಪ್ರಕರಣ ಕುರಿತಾಗಿ ಇಂದು (ಆಗಸ್ಟ್ 29) ನಟ ದರ್ಶನ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ವಿಚಾರಣೆ ಹಾಗೂ ಸ್ಥಳ ಮಹಜರು ಸಹ ಮಾಡಲಾಗಿದೆ. ಇಂದೇ ಸಂಜೆ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ವರ್ಗ ಮಾಡುವ ಸುದ್ದಿ ಹಬ್ಬಿತ್ತು, ಆದರೆ ಇಂದು ವಿಚಾರಣೆ ನಡೆದಿದ್ದು, ಇನ್ನೂ ಕೆಲವು ಆರೋಪಿಗಳ ವಿಚಾರಣೆ ನಡೆಯಬೇಕಿರುವ ಕಾರಣ ವರ್ಗಾವಣೆಯನ್ನು ನಾಳೆಗೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ನಟ ದರ್ಶನ್ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ನಾಳೆ ಬೆಂಗಳೂರು, ತುಮಕೂರು, ಹಿರಿಯೂರು, ಚಳ್ಳಕೆರೆ, ರಾಯದುರ್ಗ ಮಾರ್ಗವಾಗಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ನಟನನ್ನು ಸ್ಥಳಾಂತರ ಮಾಡಲಾಗುತ್ತದೆ. ಇಂದು ದರ್ಶನ್ ಬಳ್ಳಾರಿಗೆ ಜೈಲಿಗೆ ಬರುತ್ತಾರೆಂದು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಳ್ಳಾರಿ ಜೈಲಿನ ಮುಂದೆ ಜಮಾವಣೆಗೊಂಡಿದ್ದರು. ಅದರೆ ದರ್ಶನ್ ನಾಳೆ ಬರಲಿದ್ದಾರೆ ಎಂದು ತಿಳಿದು ಬಂದ ತಕ್ಷಣ ನಿರಾಸೆಗೊಂಡು ವಾಪಸ್ ತೆರಳಿದ್ದಾರೆ.

ಬಳ್ಳಾರಿ ಜೈಲಿಗೆ ನಾಳೆ ನಟ ದರ್ಶನ್ ತೂಗದೀಪ, ಸಂಚಾರ ಮಾರ್ಗ ವಿವರ ಹೀಗಿದೆ…

ಬಳ್ಳಾರಿ ಜೈಲಿನಲ್ಲಿ ದರ್ಶನ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಸಿಟಿವಿ, ಬಾಡಿ ಕ್ಯಾಮ್ ವ್ಯವಸ್ಥೆಯೂ ಸಹ ಬಳ್ಳಾರಿ ಜೈಲಿನಲ್ಲಿದೆ. ಜಾಮರ್​ಗಳನ್ನು ಸಹ ಪರಿಶೀಲಿಸಲಾಗಿದೆಯಂತೆ. ಬಳ್ಳಾರಿಯ ವಿಶೇಷ ಭದ್ರತಾ ಬ್ಯಾರಕ್ 15 ರಲ್ಲಿ ದರ್ಶನ್ ಅನ್ನು ಇರಿಸಲಾಗುತ್ತದೆ. ಬಳ್ಳಾರಿ ಜೈಲಿನಲ್ಲಿ ಈಗಾಗಲೇ 385 ಮಂದಿ ಕೈದಿಗಳಿದ್ದಾರೆ. 100 ಮಂದಿ ಸಿಬ್ಬಂದಿ ಇದ್ದಾರೆ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

Darshan

ಅಸಲಿ ಕೈದಿಯಾಗಿ ಶಿಫ್ಟ್‌: ಬಳ್ಳಾರಿ ಜೈಲಿನಲ್ಲಿ ಈ ಹಿಂದೆ ಕನ್ನಡದ ‘ಚೌಕ’ ಚಿತ್ರದ ಚಿತ್ರೀಕರಣ ನಡೆದಿತ್ತು. ಆ ಚಿತ್ರದಲ್ಲಿ ಕೈದಿ ಪಾತ್ರಧಾರಿಯಾಗಿದ್ದ ದರ್ಶನ್‌, ಇದೇ ಜೈಲಿನಲ್ಲಿ ಕೈದಿಯಾಗಿ ಅಭಿನಯಿಸಿದ್ದರು. ಕಾಕತಾಳೀಯ ಎಂಬಂತೆ ದರ್ಶನ್‌ರನ್ನು ಈಗ ಬಳ್ಳಾರಿ ಜೈಲಿಗೆ ವಿಚಾರಣಾಧೀನ ಕೈದಿಯಾಗಿ ಸ್ಥಳಾಂತರಿಸಲಾಗುತ್ತಿದೆ. ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಇಷ್ಟು ದಿನ ತುಂಬಾ ಸಲೀಸಾಗಿ ಮೂರ್ನಾಲ್ಕು ತಾಸಿನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದು ದರ್ಶನ್‌ರನ್ನು ಭೇಟಿಯಾಗಿ ಹೋಗುತ್ತಿದ್ದರು.  ದರ್ಶನ್‌, ಬಳ್ಳಾರಿ ಜೈಲಿಗೆ ಸ್ಥಳಾಂತರವಾದರೆ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಅವರನ್ನು ಭೇಟಿಯಾಗಲು ಸಮಸ್ಯೆಯಾಗಲಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಬಂದು ದರ್ಶನ್‌ರನ್ನು ಭೇಟಿಯಾಗುವುದು ತ್ರಾಸದಾಯಕವಾಗಲಿದೆ.

ಕೇಂದ್ರ ಮಾಜಿ ಸಚಿವ ಎಸ್​.ಎಂ. ಕೃಷ್ಣ ಆರೋಗ್ಯ ಸ್ಥಿತಿ ಹೇಗಿದೆ? ಇಲ್ಲಿದೆ ಮಹತ್ವದ ಅಪ್‌ಡೇಟ್

Share This Article

Kitchen Hacks: ಹಣ್ಣು, ತರಕಾರಿಗಳ ಸಿಪ್ಪೆ ಎಸೆಯುತ್ತಿದ್ದೀರಾ? ಹೀಗೆ ಮರುಬಳಕೆ ಮಾಡಬಹುದು ನೋಡಿ

Kitchen Hacks: ಹಣ್ಣುಗಳು, ತರಕಾರಿಗಳು ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಇವುಗಳನ್ನು ಬಳಸಿದ…

ಹಣದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವೇ? ಹೌದು ಎಂದಾದರೆ ಹೀಗೆ ಮಾಡಿ… Money Problems

Money Problems : ಪತಿ ಮತ್ತು ಪತ್ನಿ ಪರಸ್ಪರ ಅರ್ಥ ಮಾಡಿಕೊಂಡು ಒಟ್ಟಿಗೆ ಸಾಗಿದರೆ ಜೀವನ…

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…