ದರ್ಶನ್​, ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ; 'ದಾಸ'ನಿಗೆ ಸಂಕಷ್ಟ ತಂದಿಟ್ಟ ವಿದೇಶಿ ಬಾತುಕೋಳಿ | Actor Darshan

ವಿಜಯವಾಣಿ - 2025-05-23T134526.965
Published on

Actor Darshan: ಕೆಲವು ತಿಂಗಳುಗಳ ಹಿಂದೆಯಷ್ಟೇ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿರುವ ಆರೋಪಿ ದರ್ಶನ್​, ಇದೀಗ ತಮ್ಮ ಬಾಕಿ ಉಳಿದಿರುವ ಚಿತ್ರಗಳ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆ ದರ್ಶನ್​ಗೆ ಮತ್ತೊಂದು ತಲೆಬಿಸಿ ಎದುರಾಗಿದ್ದು, ತಮ್ಮ ಒಡೆತನದಲ್ಲಿರುವ ಫಾರ್ಮ್​ಹೌಸ್​ಗೆ ಸಂಬಂಧಿಸಿದಂತೆ ಟಿ.ನರಸೀಪುರ ಕೋರ್ಟ್​ನಿಂದ ಸಮನ್ಸ್ ಜಾರಿಯಾಗಿದೆ.

ದರ್ಶನ್​ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಮನ್ಸ್ ಜಾರಿಯಾಗಿದ್ದು, ತಮ್ಮ ಮೈಸೂರು ಫಾರ್ಮ್​ಹೌಸ್​ನಲ್ಲಿ ಸಾಕಿದ್ದ ವಿದೇಶಿ ಬಾತುಕೋಳಿ ವಿಚಾರಕ್ಕೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಈಗ ಅದಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಲಾಗಿದೆ.

ಈ ಹಿಂದೆ ದರ್ಶನ್​ ಫಾರ್ಮ್​ ಹೌಸ್​ ಮೇಲೆ ದಾಳಿ ನಡೆಸಿದ್ದ ಅರಣ್ಯಾಧಿಕಾರಿಗಳು, ಬಾರ್​ ಹೆಡೆಡ್​ ಗೂಸ್​ ಎಂಬ ವಿದೇಶಿ ಪ್ರಭೇದದ ಬಾತುಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದ ವಿಚಾರಣೆ ಮೈಸೂರು ಜಿಲ್ಲೆಗೆ ಸೇರುವ ಟಿ.ನರಸೀಪುರ ಕೋರ್ಟ್​ನಲ್ಲಿ ನಡೆಯುತ್ತಿದೆ. ಪ್ರಸ್ತುತ ಇದರ ವಿಚಾರಣೆಯ ಸಲುವಾಗಿ ಇದೀಗ ನ್ಯಾಯಾಲಯ ದರ್ಶನ್ ಮತ್ತು ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ ಮಾಡಿದ್ದು, ಜುಲೈ 4ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net