VIDEO| ಅರಣ್ಯದಲ್ಲಿ ದರ್ಶನ್​ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಪ್ರಾಣಿ ಇದು...

Darshan - Copy
Published on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಸಿನಿಮಾದ ಜತೆಗೆ ಪ್ರಾಣಿಗಳ ಮೇಲೂ ಅತೀವ ಆಸಕ್ತಿ ಮತ್ತು ಪ್ರೀತಿ. ಹಾಗಾಗಿಯೇ ಅವರ ಮೈಸೂರಿನ ಫಾರ್ಮ್​ ಹೌಸ್​ನಲ್ಲಿ ಸಾಕಷ್ಟು ಸಾಕು ಪ್ರಾಣಿಗಳಿವೆ. ಅಷ್ಟೇ ಅಲ್ಲ ಮೈಸೂರಿನ ಮೃಗಾಲಯದಲ್ಲಿನ ಹಲವು ಪ್ರಾಣಿ ಪಕ್ಷಿಗಳನ್ನೂ ದತ್ತು ಪಡೆದಿದ್ದಾರವರು. ಬಿಡುವಿನ ಸಮಯದಲ್ಲಿ ಕಾಡಿಗೆ ತೆರಳಿ ಅಲ್ಲಿನ ಪ್ರಾಣಿಗಳ ಫೋಟೋ ತೆಗೆಯುವುದೂ ದರ್ಶನ್​ಗಿಷ್ಟ. ಅದೇ ರೀತಿ ಇದೀಗ ನಾಗರಹೊಳೆಯಲ್ಲಿ ಬಿಡಾರ ಹೂಡಿದ್ದಾರೆ.

ಅರಣ್ಯದಲ್ಲಿ ಸಫಾರಿ ತೆರಳಿರುವ ದರ್ಶನ್​, ಹುಲಿಯ ಫೋಟೋ ತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೀಪ್​ನಲ್ಲಿ ಕುಳಿತು ಹುಲಿಯ ಬಗೆಬಗೆ ಭಂಗಿಗಳನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದಾರೆ. ಈ ಹಿಂದೆ ಆನೆಯ ಫೋಟೋವನ್ನು ದರ್ಶನ್​ ಸೆರೆಹಿಡಿದಿದ್ದರು. ಆ ಫೋಟೋವನ್ನು ನಟ ಚಿಕ್ಕಣ್ಣ ಒಂದು ಲಕ್ಷ ಮೊತ್ತ ಕೊಟ್ಟ ಖರೀದಿಸಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಬಹುನಿರೀಕ್ಷಿತ ರಾಬರ್ಟ್​ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಮಾರ್ಚ್ 11ರ ಮಹಾಶಿವರಾತ್ರಿ ದಿನದಂದು ಕನ್ನಡದ ಜತೆಗೆ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅದೇ ರೀತಿ ಇನ್ನೇನು ಶೀಘ್ರದಲ್ಲಿ ಟ್ರೇಲರ್​ ರಿಲೀಸ್ ಮಾಡುವ ಬಗ್ಗೆಯೂ ಚಿತ್ರತಂಡ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net