More

    ಡ್ರಗ್​ ಮಾಫಿಯಾ; ಚಿರು ಸರ್ಜಾ ವಿರುದ್ಧ ಮಾತನಾಡಿದವರಿಗೆ ಚೇತನ್​ ಚಾಟಿ!

    ಸ್ಯಾಂಡಲ್​ವುಡ್ ಡ್ರಗ್​ ಮಾಫಿಯಾ ಪ್ರಕರಣದ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಅದರಲ್ಲೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಮಾಡಿರುವ ಆರೋಪಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಆ ಬೆನ್ನಲ್ಲೆ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿದ್ದಾರೆ.

    ಇದನ್ನೂ ಓದಿ: ರಿಯಾ ಚಕ್ರವರ್ತಿ ಕಪಾಳಕ್ಕೆ ಬಾರಿಸಿದರಾ ಸಿಬಿಐ ಅಧಿಕಾರಿ?

    ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಯಾಂಡಲ್​ವುಡ್​ನಲ್ಲಿ ಸದ್ಯ ಏನೆಲ್ಲ ಆಗುತ್ತಿದೆ ಮತ್ತು ಏನೆಲ್ಲ ಆಗಬೇಕಿತ್ತು ಎಂಬುದನ್ನು ಕೇಳಿಕೊಳ್ಳುವುದರ ಜತೆಗೆ ಜೂನ್​ 7ರಂದು ಸಾವನ್ನಪ್ಪಿದ ಚಿರು ಸರ್ಜಾ ವಿರುದ್ಧದ ಆರೋಪಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

    ಡ್ರಗ್​ ಮಾಫಿಯಾ; ಚಿರು ಸರ್ಜಾ ವಿರುದ್ಧ ಮಾತನಾಡಿದವರಿಗೆ ಚೇತನ್​ ಚಾಟಿ!
    ‘ಈ ಸಮಯದಲ್ಲಿ ಬೇಕಾಗಿರುವುದು: ಮಾದಕ ವಸ್ತುವಿನ ಜಾಗೃತಿ ಅಭಿಯಾನ, ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು, ಮತ್ತು ಸರಿಯಾದ ತನಿಖೆಗಳು. ಬೇಡವಾದದ್ದು: ಮಸಿ ಬಳಿಯುವುದು/ಉದ್ರೇಕಕಾರಿ ಹೇಳಿಕೆಗಳು’ ಎಂದು ಆರಂಭದಲ್ಲಿಯೇ ಪೀಠಿಕೆ ಹಾಕಿದ್ದಾರೆ.

    ಇದನ್ನೂ ಓದಿ: ಸನ್ನಿ ಲಿಯೋನ್​ ಬಳಿಕ ಪದವಿ ಕಾಲೇಜು ಪ್ರವೇಶ ಪಡೆದ ಗಾಯಕಿ ನೇಹಾ ಕಕ್ಕರ್​!

    ಬಳಿಕ ‘ಸಿಗರೇಟು/ಮದ್ಯ/ಮಾದಕ ಮತ್ತು ಪಾರ್ಟಿಗೆ ಹೋಗುವ ಅಭ್ಯಾಸಗಳು ನನಗಿಲ್ಲ. ಮುಂದುವರೆದು ಕನ್ನಡ ಸಿನಿಮಾರಂಗದ ಯಾವುದೇ ಸಾಮಾಜಿಕ ಅಭ್ಯಾಸಗಳ ಬಗ್ಗೆ ಗೊತ್ತಿಲ್ಲದ ನನಗೆ ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಾಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ. ನಾವು ಯಾವುದೇ ಆರೋಪಗಳನ್ನು ಹೋರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ’ ಎಂದು ಇಂದ್ರಜಿತ್​ ಮೇಲೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

    ಡ್ರಗ್ಸ್ ಕೇವಲ ಸ್ಯಾಂಡಲ್​​ವುಡ್​ ಅಲ್ಲ..ಇಡೀ ಕರ್ನಾಟಕಕ್ಕೇ ಅಂಟಿದ ಕಳಂಕ: ನಟ ದರ್ಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts