‘ಮಾಫಿಯಾ’ ಚಿತ್ರೀಕರಣ ಮುಕ್ತಾಯ; ಜೂನ್​ನಲ್ಲಿ ಬಿಡುಗಡೆ

blank

ಬೆಂಗಳೂರು: ಪ್ರಜ್ವಲ್​ ದೇವರಾಜ್​ ಅಭಿನಯದ ‘ಮಾಫಿಯಾ’ ಚಿತ್ರದ ಚಿತ್ರೀಕರಣ ಕಳೆದ ವರ್ಷದ ಆರಂಭದಲ್ಲೇ ಪ್ರಾರಂಭವಾಗಿತ್ತು. ಇದೀಗ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್​ನಲ್ಲಿ 60 ದಿನಗಳ ಕಾಲ ಚಿತ್ರೀಕರಣ ಮಾಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರೀಕರಣ ಮುಗಿಸಿದೆ.

ಇದನ್ನೂ ಓದಿ: ಮಾಯಾವಿ ಯಾರು? ‘ಶಿವಾಜಿ ಸುರತ್ಕಲ್ 2’ ಟ್ರೇಲರ್ ಬಿಡುಗಡೆ …

‘ಮಾಫಿಯಾ’ ಒಂದು ಆಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ಪ್ರಜ್ವಲ್​ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ನಟನೆಯ 35ನೇ ಚಿತ್ರವಾಗಿದ್ದು, ಆಕ್ಷನ್ ಪ್ರಿಯರಿಗೆ ಈ ಚಿತ್ರ ಬಹಳ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ಲೋಹಿತ್​.

ಈ ಚಿತ್ರದಲ್ಲಿ ಐದು ಫೈಟ್​ಗಳಿದ್ದು, ವಿನೋದ್, ರಿಯಲ್ ಸತೀಶ್, ಡಿಫರೆಂಟ್ ಡ್ಯಾನಿ ಹಾಗೂ ಜಾಲಿ ಬಾಸ್ಟಿನ್ ಸಾಹಸ ಸಂಯೋಜನೆ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶದ ಚಿತ್ರೀಕರಣ 10 ದಿನಗಳ ಕಾಲ ನಡೆದಿದ್ದು, ಇದು ಚಿತ್ರದ ಹೈಲೈಟ್​ ಎನ್ನುತ್ತಾರೆ ಲೋಹಿತ್​.

ಕುಮಾರ್​ ಫಿಲಂ ಫ್ಯಾಕ್ಟರಿಯಡಿ ಬೆಂಗಳೂರು ಕುಮಾರ್​ ನಿರ್ಮಿಸಿರುವ ಈ ಚಿತ್ರಕ್ಕೆ ಅನೂಪ್​ ಸೀಳಿನ್​ ಸಂಗೀತ ಸಂಯೋಜಿಸಿದರೆ, ಎಸ್​. ಪಾಂಡಿಕುಮಾರ್​ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಪೋಸ್ಟರ್​ ಪ್ರೊಡಕ್ಷನ್​ ಹಂತದಲ್ಲಿರುವ ಈ ಚಿತ್ರವು ಜೂನ್​ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮೂರು ಚಿತ್ರಗಳಿಗೆ ಸುದೀಪ್​ ಗ್ರೀನ್​ ಸಿಗ್ನಲ್​; ಸದ್ಯದಲ್ಲೇ ಘೋಷಣೆ

‘ಮಾಫಿಯಾ’ ಚಿತ್ರದಲ್ಲಿ ಪ್ರಜ್ವಲ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಮಿಕ್ಕಂತೆ ದೇವರಾಜ್, ಸಾಧು ಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರರು ನಟಿಸಿದ್ದಾರೆ.

ಇನ್​ಸ್ಟಾಗ್ರಾಂಗೆ ಕಾಲಿಟ್ಟ ದಳಪತಿ; ಒಂದೇ ಗಂಟೆಯಲ್ಲಿ 5 ಲಕ್ಷ ಫಾಲೋವರ್ಸ್!

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…