More

    ಮತ್ತೊಂದು ವಿವಾದಕ್ಕೆ ಕಾರಣವಾದ ನಟ ಚೇತನ್​ ಪೋಸ್ಟ್​​ …

    ಬೆಂಗಳೂರು: ಸ್ಯಾಂಡಲ್​ವುಡ್ ನಟ ಚೇತನ್​ ಕುಮಾರ್​ ಮೈಮೇಲೆ ಹೊಸ ವಿವಾದವನ್ನು ಎಳೆದುಕೊಂಡಿದ್ದಾರೆ. ‘ಕಾಂತಾರ’ ಸಿನಿಮಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇನ್ನೊಂದು ಹೊಸ ವಿವಾದಕ್ಕೆ ಸಿಲುಕಿದ್ದಾರೆ. ‘ಪಾಕಿಸ್ತಾನ ಜಿಂದಾಬಾದ್​’ ಎಂದು ಕೂಗಿರುವ ವಿದ್ಯಾರ್ಥಿಗಳ ಪರ ಬ್ಯಾಟಿಂಗ್​ ಮಾಡಿರುವ ಚೇತನ್​, ವಾಕ್​ಸ್ವಾತಂತ್ಯವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನೋ ಇಂಟರ್ವಲ್ ನಯನತಾರಾ; ಹೆದರಿಸಲು ಬರುತ್ತಿದ್ದಾರೆ ಲೇಡಿ ಸೂಪರ್​ಸ್ಟಾರ್

    ಇತ್ತೀಚೆಗೆ ಪ್ರತಿಷ್ಠಿತ ಕಾಲೆಜೊಂದರ ವಿದ್ಯಾರ್ಥಿಗಳು ‘ಪಾಕಿಸ್ತಾನ್​ ಜಿಂದಾಬಾದ್​’ ಎಂದು ಘೋಷಣೆ ಕೂಗಿ, ವಿವಾದಕ್ಕೆ ಕಾರಣರಾಗಿದ್ದರು. ಕಾಲೇಜು ಫೆಸ್ಟ್​ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ನಂತರ ಆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು ಎಂದು ಹೇಳಲಾಗಿದೆ.

    ಈಗ ಆ ವಿದ್ಯಾರ್ಥಿಗಳ ಪರವಾಗಿ ಚೇತನ್​ ಮಾತನಾಡಿದ್ದು, ಇದು ಅಸಂಬದ್ಧ ಮತ್ತು ಅಪಾಯಕಾರಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು, ನಮ್ಮ ಶತ್ರುಗಳಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸಿನಿಮಾಗೆ ಬಂದರು ಹೊಸ ವೈದ್ಯರು; ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ‘ಪ್ರಜಾರಾಜ್ಯ’

    ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್​, ‘ಕಾಲೇಜು ಫೆಸ್ಟ್​ನಲ್ಲಿ ಬೆಂಗಳೂರಿನ ಮೂರು ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್​’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್​, ರಿಯಾ ಮತ್ತು ದಿನಕರ್​ ಅವರನ್ನು ಥಳಿಸಿ ಬೆದರಿಸಿ ಪೊಲೀಸ್​ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ. ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು, ನಮ್ಮ ಶತ್ರುಗಳಲ್ಲ. ವಾಕ್​ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು’ ಎಂದು ಚೇತನ್​ ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

    ‘ವಿಜಯಾನಂದ’ ಟ್ರೈಲರ್ ಹವಾ; ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಲಕ್ಷ ವ್ಯೂವ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts