More

    ಸಿನಿಮಾಗೆ ಬಂದರು ಹೊಸ ವೈದ್ಯರು; ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ‘ಪ್ರಜಾರಾಜ್ಯ’

    ಬೆಂಗಳೂರು: ಸಾಮಾನ್ಯವಾಗಿ ವೈದ್ಯರು ಚಿತ್ರರಂಗದಲ್ಲಿ ಕಡಿಮೆಯೇ. ಕೆಲವರು ಆಕ್ಟಿಂಗ್ ಮಾಡಿದ್ದರೆ, ಕೆಲವರು ಸಿನಿಮಾ ನಿರ್ವಿುಸಿದ್ದಾರೆ. ಆದರೆ ತಾಂತ್ರಿಕ ವಿಷಯಗಳಲ್ಲಿ ತೊಡಗಿಕೊಂಡಿರುವುದು ಅಪರೂಪ. ಆದರೆ ನರರೋಗ ತಜ್ಞರಾದ ಡಾ. ವರದರಾಜು ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ವಿುಸಿದ್ದಾರೆ. ಹೆಸರು ‘ಪ್ರಜಾರಾಜ್ಯ’. ಇತ್ತೀಚೆಗಷ್ಟೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಮತ್ತು ಉಚಿತ ಆರೋಗ್ಯ ಸೌಲಭ್ಯ ಸಿಗಬೇಕು. ಅದನ್ನು ಕೇಳುವ ಹಕ್ಕು ನಮಗಿದೆ. ಏಕೆಂದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿರುತ್ತೇವೆ. ಆರೋಗ್ಯ ಸಮಸ್ಯೆ, ಶಿಕ್ಷಣ ವ್ಯವಸ್ಥೆ ಮತ್ತು ರೈತರ ಕಷ್ಟಗಳ ಕುರಿತು ಈ ಚಿತ್ರದ ಮಾಡಿದ್ದೇವೆ. ‘ಉಪೇಂದ್ರ’ ಚಿತ್ರ ನನಗೆ ಸ್ಪೂರ್ತಿ’ ಎನ್ನುತ್ತಾರೆ.

    ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟ ಟಿಎಸ್ ನಾಗಾಭರಣ, ‘ವರ್ಷಕ್ಕೆ ಸುಮಾರು 400 ಚಿತ್ರಗಳು ಬಿಡುಗಡೆಯಾಗುತ್ತಿವೆ. ನೋಡುಗರಿಗೆ ಬೇಕಾದ ಸಿನಿಮಾ ಮಾಡುವವರು ಹೆಚ್ಚಾಗಿದ್ದಾರೆ. ಆದರೆ, ಸಾಮಾಜಿಕ ಕಳಕಳಿಯಿಟ್ಟುಕೊಂಡು ತಮಗೆ ಅನಿಸಿದ್ದನ್ನು ಸಿನಿಮಾ ಮಾಡಿರುವ ಡಾ. ವರದರಾಜ್ ಅವರ ಧೈರ್ಯ ಮೆಚ್ಚುವಂತದ್ದು’ ಎಂದರು.

    ವಿಜಯ್ ಭಾರ್ಗವ್ ನಿರ್ದೇಶನದ ‘ಪ್ರಜಾರಾಜ್ಯ’ದಲ್ಲಿ ದೇವರಾಜ್, ನಾಗಾಭರಣ, ಸುಧಾರಾಣಿ, ಅಚ್ಯುತ್ ಕುಮಾರ್, ತಬಲಾ ನಾಣಿ, ಸುಧಾ ಬೆಳವಾಡಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಅಡಿಬರಹವಿದೆ. ಚಿತ್ರಕ್ಕೆ ವಿಜೇತ್ ಮಂಜಯ್ಯ ಸಂಗೀತ, ರಾಕೇಶ್ ತಿಲಕ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ‘ಪ್ರಜಾರಾಜ್ಯ’ ಬಿಡುಗಡೆಗೆ ಸಿದ್ಧವಾಗಿದೆ.

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ನಿದ್ರೆ ಬರುತ್ತಿಲ್ಲ ಅಂತ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತುರ್ತು ಕರೆ; ಪಕ್ಕದಮನೆಯಾತನ ಗೊರಕೆ ನಿಲ್ಲಿಸುವಂತೆ ದೂರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts