More

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ಬೆಂಗಳೂರು: ಆಸ್ಟ್ರೇಲಿಯನ್‌ ಸಿನಿಮಾವೊಂದಕ್ಕೆ ಭಾರತೀಯ ಮೂಲದ ಯುವಕ ಸಂಗೀತ ನೀಡಿದ್ದು, ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿಯನ್ನೂ ಗಿಟ್ಟಿಸಿಕೊಳ್ಳುವ ಮೂಲಕ ಗಮನಾರ್ಹ ಸಾಧನೆಯನ್ನೂ ಮಾಡಿದ್ದಾರೆ. ಹೀಗೆ ತಮ್ಮ ಮೊದಲ ಚಿತ್ರದಲ್ಲೇ ಪ್ರಶಸ್ತಿಯನ್ನು ಗಳಿಸಿದವರು ಸಿದ್ಧಾರ್ಥ್ ಆಚಾರ್ಯ.

    ಸಿದ್ ಆಚಾರ್ಯ ಎಂದೇ ಕರೆಯಲ್ಪಡುವ ಇವರು ಆಸ್ಟ್ರೇಲಿಯನ್‌ ಫೀಚರ್‌ ಸಿನಿಮಾ ‘ಬೀಟ್’ಗೆ ಸಂಗೀತ ಸಂಯೋಜನೆ ಮಾಡಿದ್ದು, ಅದು ಬೆಸ್ಟ್‌ ಒರಿಜಿನಲ್‌ ಸ್ಕೋರ್‌ ವಿಭಾಗದಲ್ಲಿ ಎಎಫ್‌ಐಎನ್‌ ಇಂಟರ್‌ನ್ಯಾಷನಲ್ ಪ್ರಶಸ್ತಿಗೆ ಪಾತ್ರವಾಗಿದೆ. ಅಫಿನ್‌ ಇಂಟರ್‌ನ್ಯಾಷನಲ್‌ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಜಗತ್ತಿನಾದ್ಯಂತದಿಂದ 200 ಸಿನಿಮಾಗಳು ಸ್ಪರ್ಧೆಯಲ್ಲಿದ್ದವು.

    ಸಿದ್ಧಾರ್ಥ್ ಆಚಾರ್ಯ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಇವರು ಆಸ್ಟ್ರೇಲಿಯಾದ ಪ್ರಮುಖ ಕಂಟೆಂಪೊರರಿ ಮ್ಯೂಸಿಕಲ್ ಕಾಂಪೋಸರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಮೊದಲ ಬಾರಿಗೆ ಆಸ್ಟ್ರೇಲಿಯನ್ ಸಿನಿಮಾಗೆ ಪೂರ್ಣಪ್ರಮಾಣದಲ್ಲಿ ಹಿನ್ನೆಲೆ ಸಂಗೀತ ಹಾಗೂ ಸಂಗೀತ ಸಂಯೋಜನೆ ಮಾಡಿದ್ದಲ್ಲದೆ, ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ಪ್ರಶಸ್ತಿಯನ್ನೂ ಪಡೆದಿದ್ದಾರೆ.

    ನನ್ನ ಮೊದಲ ಸಿನಿಮಾದ ಸಂಗೀತ ಸಂಯೋಜನೆ ಗುರುತಿಸಲ್ಪಟ್ಟಿದ್ದಲ್ಲದೆ ಪ್ರಶಸ್ತಿಗೂ ಪಾತ್ರವಾಗಿದ್ದು, ನನಗೆ ಸ್ಫೂರ್ತಿಯನ್ನು ನೀಡಿ ಹುರಿದುಂಬಿಸಿದೆ. ಸಂಗೀತ ಸಂಯೋಜನೆ ಎನ್ನುವುದು ಸುಪ್ತಮನಸಿನಲ್ಲಿ ನಡೆಯುವ ಒಂದು ಕ್ಲಿಷ್ಟ ಕಥಾನಕ. ‘ಬೀಟ್’ ಸಿನಿಮಾಗೆ ಸಂಗೀತ ಸಂಯೋಜಿಸಿರುವುದು ಒಂದು ಅವಿಸ್ಮರಣೀಯ ಅನುಭವ. ನಿರ್ದೇಶಕರು ಚಿತ್ರದ ಚಿತ್ರಣದೊಂದಿಗೆ ನನ್ನನ್ನು ಮೊದಲ ಸಲ ಸಂಪರ್ಕಿಸಿದ್ದಾಗ ನಾನು ಸ್ವಲ್ಪ ಹಿಂಜರಿದಿದ್ದೆ. ಆದರೆ ಏನನ್ನಾದರೂ ಸಾಧಿಸಬೇಕೆಂದರೆ ನಾನು ಅದರಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪೂರ್ಣಪ್ರಮಾಣದಲ್ಲಿ ಪರಿಶ್ರಮ ಪಡಬೇಕು ಎಂಬುದು ನನಗೆ ಕೆಲವೇ ಕ್ಷಣಗಳಲ್ಲಿ ಅರಿವಾಯಿತು. ಆ ಪರಿಶ್ರಮಕ್ಕೆ ಈ ರೀತಿಯ ಪ್ರತಿಫಲ ಸಿಕ್ಕಿರುವುದು, ಪ್ರೇಕ್ಷಕರಿಂದ ಇಂಥ ಮೆಚ್ಚುಗೆ ಸಿಕ್ಕಿರುವುದು ಒಂದು ರೀತಿಯ ಧನ್ಯತಾಭಾವ ನೀಡಿದೆ.
    | ಸಿದ್ದಾರ್ಥ್ ಆಚಾರ್ಯ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ.

    ಇದನ್ನೂ ಓದಿ: ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ

    ಈ ಆಸ್ಟ್ರೇಲಿಯನ್ ಚಿತ್ರವನ್ನು ‘ಗ್ರೀನ್ ಫ್ರಾಗ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡಿದ್ದು, ನೊವೊಕ್ಯಾಸ್ಟ್ರಿಯನ್ ಜೈ ಕ್ಯೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ನಿರಾಶ್ರಿತರು ಮತ್ತು ಸಮಾಜದಲ್ಲಿನ ತಾರತಮ್ಯದ ಕಥಾಹಂದರವನ್ನು ಹೊಂದಿದೆ. ಅಲ್ಲದೆ ಪಿಯಾನೋ ನುಡಿಸುವ ಪಾತ್ರಗಳ ಕಥಾಹಂದರ ಇರುವ ‘ಬೀಟ್’ ಚಿತ್ರಕ್ಕೆ ಸಿದ್ ಅವರ ಸಂಗೀತವು ಪ್ರೇಕ್ಷಕರಲ್ಲಿ ತೀವ್ರವಾದ ಸಂವೇದನೆಯ ಅನುಭವ ಸೃಷ್ಟಿಸುತ್ತದೆ.

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ‘ಡಾ.ಬ್ರೋ’ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ‘ನಮಸ್ಕಾರ ದೇವರು’?

    ಸೊಸೆ ಹಿಂಸೆ ಕೊಡುತ್ತಿದ್ದಾಳೆ, ಏನ್ ಮಾಡ್ಬೇಕು ಸಾಹೇಬ್ರೇ?: ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡ ಅತ್ತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts