More

    ‘ವಿಜಯಾನಂದ’ ಟ್ರೈಲರ್ ಹವಾ; ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಲಕ್ಷ ವ್ಯೂವ್ಸ್

    ಬೆಂಗಳೂರು: ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತರವಾಗಿರುವ ‘ವಿಜಯಾನಂದ’ ಚಿತ್ರದ ಟ್ರೈಲರ್​ಗೆ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್​ ಸಿಗುತ್ತಿದೆ. ಶನಿವಾರ ರಾತ್ರಿ ಬಿಡುಗಡೆಯಾದ ಈ ಟ್ರೈಲರ್ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸೌಂಡ್ ಮಾಡುತ್ತಿರುವುದರ ಜತೆಗೆ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಲಕ್ಷಲಕ್ಷ ವೀಕ್ಷಣೆ ಕಂಡಿದೆ.

    ಇದನ್ನೂ ಓದಿ: PHOTO GALLERY | ವಿಜಯಾನಂದ ಚಿತ್ರದ ಟ್ರೇಲರ್ ರಿಲೀಸ್ ಸಮಾರಂಭದ ಸಂಭ್ರಮದ ಕ್ಷಣಗಳು..

    ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ‘ವಿಜಯಾನಂದ’ ಚಿತ್ರದ ಟ್ರೈಲರ್​ ಬಿಡುಗಡೆ ಶನಿವಾರ ರಾತ್ರಿ ಒರಾಯನ್​ ಮಾಲ್​ನ ಪಿವಿಆರ್​ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಮುಗಿದಿದೆ. ದೇಶಾದ್ಯಂತ ಬಂದ ಸಿನಿಮಾ ಪತ್ರಕರ್ತರ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಮುಂತಾದ ಗಣ್ಯರು ಟ್ರೈಲರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ‘ವಿಜಯಾನಂದ’ ಚಿತ್ರದ ಟ್ರೈಲರ್​ ಒಟ್ಟು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಈ ಪೈಕಿ ಕನ್ನಡ 8.5 ಲಕ್ಷ, ಹಿಂದಿ 4 ಲಕ್ಷ, ತೆಲುಗು 3.62 ಲಕ್ಷ, ಮಲಯಾಳಂ 2.33 ಮತ್ತು ತಮಿಳು ಭಾಷೆಯ ಟ್ರೈಲರ್​ 4 ಲಕ್ಷ ವೀಕ್ಷಣೆಯನ್ನು ಕಂಡಿದೆ. ಅಷ್ಟೇ ಅಲ್ಲ, ಸಾವಿರಾರು ಲೈಕ್​ಗಳನ್ನು ಪಡೆಯುವುದರ ಜತೆಗೆ, ಪ್ರೇಕ್ಷಕರು ಈ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ, ‘ವಿಜಯಾನಂದ’ ಚಿತ್ರವು ಡಿ. 9ರಂದು ಭಾರತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜತೆಗೆ, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ಮುಂತಾದ ದೇಶಗಳಲ್ಲೂ ಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ಎಲ್ಲ ಮಕ್ಕಳಿಗೂ ಅಪ್ಪನೇ ಹೀರೋ! ತಂದೆ ಕುರಿತು ಆನಂದ ಸಂಕೇಶ್ವರ ಭಾವುಕ ಮಾತು

    ‘ವಿಜಯಾನಂದ’ ಚಿತ್ರದಲ್ಲಿ ಡಾ. ವಿಜಯ ಸಂಕೇಧ್ವರ ಅವರ ಪಾತ್ರವನ್ನು ನಿಹಾಲ್​ ರಜಪೂತ್​ ನಿರ್ವಹಿಸಿದ್ದು, ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಭರತ್​ ಬೋಪಣ್ಣ, ಸಿರಿ, ಅರ್ಚನಾ ಗೊಟ್ಟಿಗೆ, ಶೈನ್​ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಆರ್​ಎಲ್​ ಪ್ರೊಡಕ್ಷನ್ಸ್​ ಲಾಂಛನದಲ್ಲಿ ಡಾ. ಆನಂದ್​ ಸಂಕೇಶ್ವರ ನಿರ್ಮಿಸಿರುರವ ಈ ಚಿತ್ರವನ್ನು ರಿಷಿಕಾ ಶರ್ಮ ನಿರ್ದೇಶನ ಮಾಡಿದ್ದು, ಗೋಪಿಸುಂದರ್​ ಸಂಗೀತ ಸಂಯೋಜಿಸಿದ್ದಾರೆ.

    ಐಐಎಂನಲ್ಲಿ ವಿಜಯ ಸಂಕೇಶ್ವರ ಅವರ ಜೀವನವನ್ನು ಪಾಠವನ್ನಾಗಿ ಅಳವಡಿಸಬೇಕು: ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts