More

    ಐಐಎಂನಲ್ಲಿ ವಿಜಯ ಸಂಕೇಶ್ವರ ಅವರ ಜೀವನವನ್ನು ಪಾಠವನ್ನಾಗಿ ಅಳವಡಿಸಬೇಕು: ಬೊಮ್ಮಾಯಿ

    ಬೆಂಗಳೂರು: ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ನಲ್ಲಿ ಪಾಠವನ್ನಾಗಿ ಅಳವಡಿಸಬೇಕು ಮತ್ತು ಅವರ ಜೀವನವು ಹಲವರಿಗೆ ಸ್ಫೂರ್ತಿಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಡಿ.2ಕ್ಕೆ ಬಿಡುಗಡೆಯಾಗಲಿದೆ ಅನಂತ್​ ನಾಗ್, ದಿಗಂತ್​ ಅಭಿನಯದ ‘ತಿಮ್ಮಯ್ಯ & ತಿಮ್ಮಯ್ಯ’

    ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ಕನ್ನಡದ ಮೊದಲ ಬಯೋಪಿಕ್​ ಆದ ‘ವಿಜಯಾನಂದ’ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
    ‘ವಿಜಯ ಸಂಕೇಶ್ವರ ಅವರು ಬಹಳ ಹಸಿವಿರುವ ಮನುಷ್ಯ. ಅವರಿಗೆ ಯಶಸ್ಸಿನ ಹಸಿವಿದೆ. ಅವರದ್ದು ಪ್ರಿಂಟಿಂಗ್​ ಪ್ರೆಸ್​ ಇತ್ತು. ಅದರಿಂದ ಅವರು ಆರಾಮಾಗಿ ಇರಬಹುದಿತ್ತು. ಆದರೆ, ಅವರು ಆರಾಮಿರುವುದಿಲ್ಲ. ಬೇಡ ಅಂದಿದ್ದನ್ನೇ ಅವರು ಮಾಡುತ್ತಾರೆ. ಅವರಿಗೆ ಲಾಭ ಮುಖ್ಯವಲ್ಲ. ಸಾಹಸ ಮಾಡುವುದೇ ಅವರಿಗೆ ಮಜ. ಅಸಾಧ್ಯವನ್ನು ಸಾಧ್ಯ ಮಾಡುವುದೇ ಅವರ ಸಾಧನೆ. ಏನೇ ಸಾಧನೆ ಮಾಡಿದರೂ ಅವರು ಮೌಲ್ಯ ಮತ್ತು ಆದರ್ಶಗಳನ್ನು ಬಿಟ್ಟಿಲ್ಲ’ ಎಂದರು.

    ಸತ್ಯವನ್ನು ಹೇಳಿದರೆ ಜನ ಬೆಂಬಲಿಸುತ್ತಾರೆ ಎಂಬುದಕ್ಕೆ ಅವರು ದೊಡ್ಡ ಉದಾಹರಣೆ ಎಂದ ಮುಖ್ಯಮಂತ್ರಿಗಳು, ‘ಪತ್ರಿಕೆ ಶುರು ಮಾಡುವಾಗ ಬಹಳ ಮಂದಿ ಬೇಡ, ಲಾಸ್​ ಆಗುತ್ತದೆ ಎಂದು ಅನುಭ ಇರುವವರು ಹೇಳಿದರು. ವಿಜಯ ಸಂಕೇಶ್ವರ ಅವರು ಪೇಪರ್​ ಮಾಡಬೇಕು ಅಂತಿದ್ದೀನಿ ಎಂದರು. ಇನ್ನೊಂದು ಪತ್ರಿಕೆಗೆ ಅವಕಾಶ ಇದೆಯಾ ಎಂದು ಕೇಳಿದ್ದೆ. ಇದರಲ್ಲಿ ರಿಸ್ಕ್​ ಇದೆ ಎಂದಿದ್ದೆ. ಅವರು ಪತ್ರಿಕೆಯನ್ನು ಒಂದು ರೂಪಾಯಿಗೆ ಕೊಟ್ಟರು. ಎಲ್ಲರೂ ಅಚ್ಚರಿಯಿಂದ ನೋಡಿದರು. ಸಾರಿಗೆ ಕ್ಷೇತ್ರದಲ್ಲಿ ಸಾವಿರಾರು ಲಾರಿ, ಬಸ್​ ಮಾಡಿದಂತೆ ಮಾಧ್ಯಮ ಕ್ಷೇತ್ರದಲ್ಲೂ ಸಾಹಸ ಮಾಡಿದರು. ಏನೇ ಹಿನ್ನೆಡೆ ಆದರೂ ಅದನ್ನು ಮೆಟ್ಟಿ ನಿಂತು ಮೆಟ್ಟಿಲಾಗಿ ಯಶಸ್ಸು ಗಳಿಸುತ್ತಿದ್ದರು. ಅವರದ್ದು ವರ್ಣರಂಜಿತ ಸಾಹಸಮಯ ಬದುಕು’ ಎಂದರು.

    ಇದನ್ನೂ ಓದಿ: ಬುಲೆಟ್​ ಪ್ರಕಾಶ್​​ಗೆ ಭಾವುಕ ಪತ್ರ ಬರೆದ ನಿರ್ದೇಶಕ ವಿಜಯಪ್ರಸಾದ್​; ಯಾಕೆ ಗೊತ್ತಾ?

    ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್​ನಲ್ಲಿ ಇವರ ಜೀವನ ಪಾಠವಾಗಿ ಅಳವಡಿಸಬೇಕು ಎಂದ ಬಸವರಾಜ ಬೊಮ್ಮಾಯಿ, ‘ಅದರಿಂದ ಬಹಳ ಜನರಿಗೆ ಪ್ರೇರಣೆಯಾಗುತ್ತದೆ. ಕಾಯಕವೇ ಕೈಲಾಸ ಎನ್ನುವುದನ್ನು ಬಲವಾಗಿ ನಂಬಿದವರು. ದೇವರ ಮೇಲೂ ಅಪಾರವಾದ ಭಕ್ತಿ ಅವರಿಗೆ. ಹತ್ತು ಹಲವು ಸವಾಲು ಸಮಸ್ಯೆ ಎದುರಿಸಿದಾಗ ಕಾಯಕಶಕ್ತಿ ದೇವರ ಶಕ್ತಿ ಕಾದಿದೆ. ಈ ಚಿತ್ರ ಹಲವು ದಾಖಲೆಗಳನ್ನು ಮಾಡಲಿ. ನಿಜವಾದ ಕಾಯಕಪುರುಷ ವಿಜಯ ಸಂಕೇಶ್ವರ ಅವರ ಕುರಿತ ಸಿನಿಮಾ ಮೆಗಾ ಹಿಟ್​ ಆಗಲಿ. ಅವರ ಜೀವನ ಪರಂಪರೆ ತಲುಪಲಿ. ನೂರು ವಿಜಯಸಂಕೇಶ್ವರ ಹುಟ್ಟಲಿ’ ಎಂದರು.

    ಐದು ಭಾಷೆಗಳಲ್ಲಿ ‘ವಿಜಯಾನಂದ’ ಟ್ರೈಲರ್ ಬಿಡುಗಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts