More

    SIT ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್​ ಟೀಮ್​; ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ ಎಚ್​ಡಿಕೆ ಕಿಡಿ

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದೀಗ ಈ ವಿಡಿಯೋಗಳನ್ನು ಯಾರು ಬಿಡುಗಡೆ ಮಾಡಿದ್ದ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಉಳಿದಿದೆ. ಈ ಕುರಿತಾಗಿ ಕಾಂಗ್ರೆಸ್​ ಹಾಗೂ ಜೆಡಿಎಸ್​​ ನಾಯಕರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ.

    ನಿನ್ನೆ ಸುದ್ದಿ ಗೋಷ್ಠಿ ನಡೆಸಿದ್ದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ಪ್ರಕರಣದ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದಿದ್ದಾರೆ. ಗಂಭೀರ ಆರೋಪಗಳನ್ನು ಮಾಡಿರುವ ದೇವರಾಜೇಗೌಡ, ಈ ಬಗ್ಗೆ ಸಿಬಿಐ ದೂರು ನೀಡಲು ಮುಂದಾಗಿದ್ದಾರೆ.

    ವಿಡಿಯೋ ರಿಲೀಸ್​ ಸಂಬಂಧ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು, ಡಿಕೆ ಶಿವಕುಮಾರ್ ಅವರು ಮಾತನಾಡಿರುವ ಆಡಿಯೋವೊಂದು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್​. ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ಮಾಡಿ ಕೆಲವು ಸ್ಫೋಟ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕವಾಗಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವಾಗಿ ಸಾಲುಸಾಲು ಆರೋಪ ಮಾಡಿದ್ದಾರೆ.

    ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದೆ. ಪ್ರಸ್ತುತ ರಾಜಕೀಯ ಮತ್ತು ವಿಡಿಯೋ ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಪ್ರಸ್ತಾಪಿಸುತ್ತಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಎಚ್​ಡಿಕೆ, ಎಸ್​​ಐಟಿ ಎನ್ನುವುದು ಸಿದ್ದರಾಮಯ್ಯ, ಡಿಕೆಶಿವಕುಮಾರ್​ ಇನ್ವೆಸ್ಟಿಗೇಷನ್ ಟೀಮ್​​ ಆಗಿದೆ.  ಎಸ್​ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ದಿನಗಳೆ ಕಳೆಯಿತ್ತು. ಆದರೆ ಈವರೆಗೂ ಯಾರನ್ನೂ ಕೂಡಾ ಅರೆಸ್ಟ್​ ಮಾಡಿಲ್ಲ. ವಿಡಿಯೋ ಹಂಚಿಕೆ ಮಾಡಿದ ಕೆಲವರು ಹಾಸನ ಕೋರ್ಟ್​​ನಲ್ಲಿ ಬೆಲ್​ಗೆ ಅಪ್ಲೈ ಮಾಡಿದ್ದಾರೆ. ಎಸ್​ಐಟಿ ಯಾವ ರೀತಿ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

    ಯಾರು ರೇವಣ್ಣ ಮೇಲೆ ನೇರವಾಗಿ ದೂರು ಕೊಟ್ಟಿಲ್ಲ. ಅಮೇಲೆ ಕಿಡ್ನಾಪ್ ಅಂತ ಸೃಷ್ಟಿ ಮಾಡಿದ್ರು. ಕಿಡ್ನಾಪ್ ಆದ ಹೆಣ್ಣುಮಗಳನ್ನ ಎಲ್ಲಿಂದ ಕರೆದುಕೊಂಡು ಬಂದ್ರಿ. ತೋಟದ ಮನೆ ಅಂತಾರೆ. ತೋಟದ ಮನೆ ಮಹಜರ್ ಮಾಡಿದ್ರಾ?. ಆಕೆ ಹೇಳಿಕೆ ಕೊಡಲಿಲ್ಲವಾ..?, ನ್ಯಾಯಾಧೀಶರ ಮುಂದೆ ಆಕೆಯನ್ನ ಯಾಕೆ ಪ್ರೊಡ್ಯೂಸ್ ಮಾಡಿಲ್ಲ. ಯಾರನ್ನ ಕರೆದುಕೊಂಡು ಒತ್ತಡ ಹಾಕಿಸಿದ್ದೀರಾ ಎಂದು ಪ್ರಶ್ನಿಸಿದರು.

    ನೆಲದ ಕಾನೂನು ಪ್ರಕಾರ ಶಿಕ್ಷೆ ಆಗಲಿ. ನಮ್ಮ ನಾಡಿನ ತಾಯಂದಿರ ಮುಂದೆ ಹೇಳ್ತೀನಿ. ಯಾವ ವ್ಯಕ್ತಿಯನ್ನೂ ನಾನು ರಕ್ಷಣೆ ಮಾಡಲ್ಲ. ವೀಡಿಯೋ ಬಿಡುಗಡೆ ಮಾಡ್ತೀನಿ ಅಂತ ನವೀನ್ ಗೌಡ ರಾತ್ರಿ 8ಕ್ಕೆ ಹೇಳಿದ್ದಾನೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಎಫ್‍ಐಆರ್ ದಾಖಲಾಗಿದೆ. ನವೀನ್, ಕಾರ್ತಿಕ್, ಚೇತನ್, ಪುಟ್ಟರಾಜು ಮೇಲೆ ದೂರು ಕೊಟ್ಟರು. ಎಫ್‌ಐಆರ್‌ ಹಾಕಿದ್ರೂ ಈ  ಕ್ಷಣದವರೆಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಏ. 30ರಂದು ಕಾರ್ತಿಕ್ ಪ್ರೆಸ್ ಮುಂದೆ ಬರದೇ ವೀಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ರಿ. ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ. ಅವನು ಎಲ್ಲಿ ಇದ್ದಾನೆ ಅಂತ ಎಸ್‍ಐಟಿ ಹುಡುಕಿಲ್ಲ. ಸರ್ಕಾರಕ್ಕೆ ಕೇಳ್ತೀನಿ ಈ ಕೇಸ್ ರೇವಣ್ಣ, ಪ್ರಜ್ವಲ್ ಮೇಲೆ ಮಾತ್ರ ಮಾಡ್ತಿರೋದೋ ಅಥವಾ ಮಹಿಳಾ ಆಯೋಗ ಪತ್ರ ಬರೆದ ರಾಜಕಾರಣಿ ಮೇಲೋ ಅಥವಾ ಪೆನ್ ಡ್ರೈವ್ ಬಿಡುಗಡೆ ಮಾಡಿರೋರ ಮೇಲೆ ತನಿಖೆ ಆಗುತ್ತೋ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಅಲ್ಲದೇ 21 ರಂದು ವಿಡಿಯೋ ಬಿಡುಗಡೆ ಮಾಡ್ತೀನಿ ಎಂದ ನವೀನ್ ಗೌಡ ಯಾಕೆ ಬಂಧನ ಮಾಡಿಲ್ಲ. 14 ದಿನ ಆಗಿದೆ. ಪೆನ್ ಡ್ರೈವ್ ಅನ್ನ ಬಿಡುಗಡೆ ಮಾಡಿದ್ದೇನೆ ಅಂತಾನೆ ಎಂದು ನವೀನ್ ಗೌಡ ಆಡಿಯೋವನ್ನು ಕುಮಾರಸ್ವಾಮಿ ರಿಲೀಸ್ ಮಾಡಿದರು.

    ದೇವೆಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಮೊದಲು ಹೋಗಿ ಹೇಳಿಕೆ ಕೊಡು. ನನಗೆ ಏನಾದ್ರೂ ಆದರೆ ಕುಮಾರಸ್ವಾಮಿ ಕಾರಣ ಎಂದು ಹೇಳುತ್ತಾರೆ. ಪ್ರಕರಣವನ್ನು ಎಲ್ಲಿಂದ ಎಲ್ಲಿಗೂ ತೆಗೆದುಕೊಂಡು ಹೋಗುತ್ತಿದ್ದಾರೆ. ಅಷ್ಟು ಸುಲಭವಾಗಿ ಈ ಪ್ರಕರಣವನ್ನು ಮುಚ್ಚಿ ಹೋಗಲು ನಾವು ಬಿಡಿವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಪ್ರಕರಣವನ್ನು ಹಾಗೆ ಮಾತ್ರ ಬಿಡಿವುದಿಲ್ಲ. ಡಿ ಕೆ ಶಿವಕುಮಾರ್​ ಅವರನ್ನು ಕ್ಯಾಬಿನೆಟ್​ನಿಂದ ತೆಗೆದು ಹಾಕಬೇಕು. ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು. ಎಸ್​ಐಟಿ ಅಧಿಕಾರಿಗಳು ಎಜೆಂಟ್​​ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಏನನ್ನು ಹೇಳುತ್ತಾರೆ ಹಾಗೆ ತನಿಖೆ ಮಾಡುತ್ತಿದ್ದಾರೆ. ದೇವರಾಜೇ ಗೌಡ ಅವರಿಗೆ ನೋಟಿಸ್​ ಕೊಡದೆ ವಿಚಾರಣೆಗೆ ಕರೆಸಿದ್ದಾರೆ. ಯಾಕೆ ಹೀಗೆ ಮಾಡಿದ್ದಾರೆ ಎನ್ನುವುದು ಮೊದಲು ಗೊತ್ತಾಗಬೇಕು. ಯಾವ ರೀತಿ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎನ್ನುವುದು ಆಫೀಶಿಯಲ್​ ಆಗಿ ಆಗಬೇಕು. ಎಲ್ಲಾ ವಾಸ್ತು ಅಂಶ ಹೊರಗೆ ಬರಬೇಕು ಎಂದಿದ್ದಾರೆ.

    ದಹಲಿ ಗದ್ದುಗೆಗಾಗಿ ಇಲ್ಲಿ ಇಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಈ ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಈ ಪ್ರಕರಣದ ತಪ್ಪಿ ತಸ್ಥರಿಗೆ ಶಿಕ್ಷೆಯಾಗಬೇಕು. ಸತ್ಯ ಹೊರಗೆ ಬರಬೇಕು. ನಾವು ಮಾತ್ರ ಗೊಂದಲಕ್ಕೆ ಒಳಗಾಗಿಲ್ಲ, ಇಡೀ ರಾಜ್ಯವೇ ಈ ಪ್ರಕರಣದಿಂದ ಗೊಂದಲಕ್ಕೆ ಒಳಗಾಗಿದೆ. ಎರಡು ಸಾವಿರ ಪ್ರಕರಣ ಎಂದು ಹೇಳುತ್ತಿರಾ? ಆದರೆ ಇಲ್ಲಿಯವರೆಗೂ ಎಷ್ಟು ಪ್ರಕರಣಗಳು ದಾಖಲಾಗಿವೆ? ಈ ಎಲ್ಲಾ ತನಿಖೆ ನಡೆಯಬೇಕು ಎಂದಿದ್ದಾರೆ.

    ಪೆನ್​ಡ್ರೈವ್​ ಪ್ರಕರಣ ನನಗೆ ಗೊತ್ತಿದ್ದರೆ ನಾನು ಪ್ರಜ್ವಲ್​ ರೇವಣ್ಣಗೆ ಟಿಕೆಟ್​​ ನೀಡುತ್ತಲೇ ಇರಲಿಲ್ಲ. ಪೆನ್​ಡ್ರೈವ್​ ಮಾಡಿಕೊಂಡಿರುವವರು ಕಾಂಗಗ್ರೆಸ್​​ ನಾಯಕರು. ಹಂಚಿಕೆ ಮಾಡಿರುವವರು ನವೀನ್​ ಗೌಡ ಎನ್ನುವ ವ್ಯಕ್ತಿ. ಆದರೆ ಈ ಕ್ಷಣದ ವರೆಗೂ ವಿಡಿಯೋ ಹಂಚಿಕೆ ಮಾಡಿರುವವರನ್ನು ವಿಚಾರಣೆ ಮಾಡಿಲ್ಲ ಎಂದಿದ್ದಾರೆ.

    ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು ದೇವರಾಜೇಗೌಡ ಆರೋಪ; ಬೆದರಿಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದ ಡಿಕೆಶಿ

    ಮದುವೆ ಆಗುವ ಆಸೆ ಇಲ್ಲ…ರಾಜಕೀಯಕ್ಕೆ ಹೋಗಬೇಕು ಅನ್ನೋ ಪ್ಲ್ಯಾನ್​​ ಇದೆ; ಸೋನು ಶ್ರೀನಿವಾಸ್ ಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts