ಚಿಕ್ಕ ವಯಸ್ಸಿನಲ್ಲೇ ಮರೆಯಾದ ನಟ ಅಮಿತ್ ಮಿಸ್ತ್ರಿ

mistry
Published on

ಮುಂಬೈ : ಜನಪ್ರಿಯ ಗುಜರಾತಿ ಮತ್ತು ಹಿಂದಿ ಸಿನಿಮಾ ನಟ ಅಮಿತ್​ ಮಿಸ್ತ್ರಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚೆಗೆ ಅಮೇಜಾನ್ ಪ್ರೈಂನಲ್ಲಿ ಮೂಡಿಬರುತ್ತಿರುವ ವೆಬ್​ ಸೀರಿಸ್ ಬಾಂಡಿಶ್​ ಬ್ಯಾಂಡಿಟ್ಸ್​ನಲ್ಲೂ ನಟಿಸಿದ್ದ ಮಿಸ್ತ್ರಿಗೆ 47 ವರ್ಷ ವಯಸ್ಸಾಗಿತ್ತು.

"ಇಂದು ಬೆಳಿಗ್ಗೆ ಅಂಧೇರಿಯ ಅವರ ನಿವಾಸದಲ್ಲಿದ್ದಾಗ ಬಲವಾದ ಹೃದಯಾಘಾತವಾಯಿತು. ಜೊತೆಗಿದ್ದ ಅವರ ತಂದೆತಾಯಿ ವೈದ್ಯಕೀಯ ಸಹಾಯವನ್ನು ಪಡೆಯುವುದಕ್ಕೂ ಮುಂಚೆಯೇ ಸ್ಥಳದಲ್ಲೇ ಸಾವಪ್ಪಿದ್ದಾರೆ" ಎಂದು ಮಿಸ್ತ್ರಿ ಅವರ ಮ್ಯಾನೇಜರ್ ಮಹರ್ಷಿ ದೇಸಾಯಿ ತಿಳಿಸಿದ್ದಾರೆ. "ಅವರಿಗೆ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ. ಇಂದು ಬೆಳಿಗ್ಗೆ ಎದ್ದು ತಿಂಡಿ ತಿಂದಿದ್ದರು. ಹೃದಯಾಘಾತವಾಗುವ ಮುಂಚೆ ವ್ಯಾಯಾಮ ಕೂಡ ಮಾಡಿದ್ದರು. ಅವರು ಗಟ್ಟಿಮುಟ್ಟಾಗಿದ್ದರು" ಎಂದು ದೇಸಾಯಿ ದುಃಖ ವ್ಯಕ್ತಪಡಿಸಿದ್ದಾರೆ.

ಗುಜರಾತಿ ನಾಟಕ ವಲಯದಲ್ಲಿ ಮತ್ತು ಸಿನಿಮಾ ರಂಗದಲ್ಲಿ ಖ್ಯಾತರಾಗಿದ್ದ ಮಿಸ್ತ್ರಿ ಅವರು, ಹಲವು ಹಿಂದಿ ಸಿನಿಮಾಗಳಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು. ಕ್ಯಾ ಕೆಹನಾ, ಏಕ್​ ಚಾಲಿಸ್ ಕಿ ಲಾಸ್ಟ್ ಲೋಕಲ್, 99, ಶೋರ್ ಇನ್ ದ ಸಿಟಿ ಮುಂತಾದವು ಅವರು ನಟಿಸಿದ ಕೆಲವು ಸಿನಿಮಾಗಳು. ತೆನಾಲಿ ರಾಮ, ವೋಹ್, ಶ್...ಕೊಯಿ ಹೇ ಮುಂತಾದ ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net