ಐಸಿಎಆರ್​-ಐಐಎಚ್​ಆರ್​ಗೆ ಡೀಮ್ಡ್​ ವಿವಿ ಸ್ಥಾನಮಾನಕ್ಕೆ ಕ್ರಮ:ಕೇಂದ್ರ ಸಚಿವ ಎಚ್​ಡಿಕೆ ಹೇಳಿಕೆ

HDK
Published on

ಬೆಂಗಳೂರು: ಸಂಶೋಧನೆ, ವಿಸ್ತರಣೆ ಮತ್ತು ಶಿಕ್ಷಣದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯನ್ನು ಸ್ವಾಯತ್ತ ವಿವಿಯನ್ನಾಗಿ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್​-ಐಐಎಚ್​ಆರ್​) ಹೆಸರಘಟ್ಟದ ಸಂಸ್ಥೆ ಆವರಣದಲ್ಲಿ ಆಯೋಜಿಸಿರುವ "ರಾಷ್ಟ್ರೀಯ ತೋಟಗಾರಿಕೆ ಮೇಳ'ದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಐಸಿಎಆರ್​-ಐಐಎಚ್​ಆರ್​ಗೆ ಡೀಮ್ಡ್​ ವಿಶ್ವವಿದ್ಯಾಲಯ ಸ್ಥಾನಮಾನ ಕುರಿತು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​​ ಜೊತೆ ಶ್ರೀದಲ್ಲೇ ಚರ್ಚಿಸಲಾಗುವುದು. ಕೇಂದ್ರ ಸರ್ಕಾರವು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಇಟ್ಟುಕೊಂಡಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2047ರ "ವಿಕಸಿತ ಭಾರತ' ದೃಷ್ಟಿಕೋನ ಒಳಗೊಂಡಿದೆ ಎಂದು ಹೇಳಿದರು.

ಕೃಷಿ, ತೋಟಗಾರಿಕೆ ದೇಶದ ಆರ್ಥಿಕತೆಯ ಕಣ್ಣುಗಳಿದ್ದಂತೆ. ಉತ್ಪನ್ನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಮೌಲ್ಯವರ್ಧನೆಗೊಳಿಸಲು ಸರ್ಕಾರ ಮುಂದಾಗಬೇಕು. ಇದರಿಂದಾಗಿ ರೈತರ ಆದಾಯ ಹೆಚ್ಚಳವಾಗಲಿದೆ. ಇಂತಹ ಮೇಳಗಳು ರೈತರಿಗೆ, ಯುವಕರಿಗೆ, ಉದ್ಯಮಿಗಳಿಗೆ ತೋಟಗಾರಿಕೆ ಸಂಶೋಧನೆಯ ಲವನ್ನು ತಲುಪಿಸಲು ಸಹಕಾರಿಯಾಗಲಿದೆ. ಸಂಸ್ಥೆಯಲ್ಲಿ ದೊಡ್ಡ ತರಬೇತಿ ಕೇಂದ್ರ ಆರಂಭಿಸಿದರೆ ಸಾಕಷ್ಟು ರೈತರಿಗೂ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರು ಸಲಹೆ ನೀಡಿದರು. ಇದೇ ವೇಳೆ ರೈತ ಸಾಧಕರನ್ನು ಸನ್ಮಾನಿಸಲಾಯಿತು.ಮೇಳದ ಆಯೋಜನ ಕಾರ್ಯದರ್ಶಿ ಡಾ.ಶಂಕರ ಹೆಬ್ಬಾರ್​,ಬೆಂಗಳೂರಿನ ಕೃಷಿ ಅನ್ವಯಿಕ ಸಂಶೋಧನಾ ಕೇಂದ್ರ ನಿರ್ದೇಶಕ ಡಾ.ವೆಂಕಟ ಸುಬ್ರಹ್ಮಣ್ಯ, ಕೃಷಿ ವಿಜ್ಞಾನಿಗಳ ಆಯ್ಕೆ ಮಂಡಳಿ ಸದಸ್ಯ ಡಾ.ಮೇಜರ್​ ಸಿಂಗ್​, ರಾಜ್ಯ ಕೃಷಿ ಇಲಾಖೆ ಆಯುಕ್ತ ವೈ.ಎಸ್​.ಪಾಟೀಲ್​ ಮತ್ತಿತರರಿದ್ದರು.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿಸಿದ ಆಯವ್ಯಯವನ್ನು 22 ಸಾವಿರ ಕೋಟಿ ರೂ.ನಿಂದ 1.27 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದು ಸಂಸದ ಡಾ.ಸಿ.ಎನ್​.ಮಂಜುನಾಥ್​ ತಿಳಿಸಿದರು. 2025ನೇ ಸಾಲಿನ ಬಜೆಟ್​ನಲ್ಲಿ ಮಖಾನ ಬೋರ್ಡ್​ ಮಾದರಿಯಲ್ಲಿ ಹುಣಸೆ, ಜಮ್ಮು ನೆರಳೆ, ಹಲಸಿನ ಬೆಳೆಗಳ ಕುರಿತು ಸ್ವಾಯತ್ತ ಮಂಡಳಿ ರಚಿಸುವ ಮೂಲಕ ದಣ ಪ್ರಾಂತ್ಯದ ರೈತರಿಗೆ ಉತ್ತಮ ಬೆಲೆ ದೊರಕಿಸಿ ಕೊಡುವ ಅಗತ್ಯವಿದೆ.ಊಟದಲ್ಲಿ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ಆರೋಗ್ಯ ಮತ್ತು ಆಯುಸ್ಸು ವೃದ್ಧಿಸಿಕೊಳ್ಳಬೇಕು ಎಂದು ಸಂಸದರು ಸಲಹೆ ನೀಡಿದರು.

ಮೇಳಕ್ಕೆ ಅದ್ದೂರಿ ತೆರೆ

ಹೆಸರಟ್ಟದ ಐಸಿಎಆರ್​-ಐಐಎಚ್​ಆರ್​ ಸಂಸ್ಥೆ ಆವರಣದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ "ರಾಷ್ಟ್ರೀಯ ತೋಟಗಾರಿಕೆ' ಮೇಳಕ್ಕೆ ಶನಿವಾರ ಅದ್ದೂರಿಯಾಗಿ ಸಂಪನ್ನಗೊಂಡಿತ್ತು. ಕೊನೆಯ ದಿನದಂದು ಸಾವಿರಾರು ಮಂದಿ ಮೇಳಕ್ಕೆ ಭೇಟಿ ನೀಡಿದ್ದರು. ಮೇಳದಲ್ಲಿ 250ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿತ್ತು. ಹಣ್ಣು ಮತ್ತು ತರಕಾರಿ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ನಮ್ಮ ಸಂಸ್ಥೆ ಈವರೆಗೆ 330ಕ್ಕೂ ಅಧಿಕ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. 150ಕ್ಕೂ ಅಧಿಕ ತಂತ್ರಜ್ಞಾನಗಳನ್ನು ರಚಿಸಿ ಉದ್ದಿಮೆದಾರರಿಗೆ ಪರವಾನಗಿ ನೀಡಿದೆ. ಈ ಮೂಲಕ ದೇಶದ ಆರ್ಥಿಕತೆಗೆ 30 ಸಾವಿರ ಕೋಟಿ ರೂ.ಕೊಡುಗೆ ನೀಡಿದ್ದೇವೆ.ಅಂದಾಜು 70 ಸಾವಿರ ಮಂದಿ ಮೇಳಕ್ಕೆ ಭೇಟಿ ನೀಡಿದ್ದಾರೆ.

| ಡಾ.ಟಿ.ಕೆ.ಬೆಹರಾ, ಐಐಎಚ್​ಆರ್​ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net