ಕಾಯ್ದೆಗಳ ತಿದ್ದುಪಡಿಗೆ ವಿರೋಧ; ಕೂಡ್ಲಿಗಿಯಲ್ಲಿ ತಹಸೀಲ್ದಾರ್‌ಗೆ ಪ್ರಾಂತ ರೈತ ಸಂಘ ಮನವಿ

201020 Kudligi Farmers Union Appeal
ಕೂಡ್ಲಿಗಿಯಲ್ಲಿ ತಹಸೀಲ್ದಾರ್ ಎಸ್.ಮಹಾಬಲೇಶ್ವರಗೆ ತಾಲೂಕು ರೈತ ಸಂಘ ಮಂಗಳವಾರ ಮನವಿ ಸಲ್ಲಿಸಿತು.
Published on

ಕೂಡ್ಲಿಗಿ: ಭೂ ಸುಧಾರಣೆ, ಎಪಿಎಂಸಿ ಸೇರಿ ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಮಂಗಳವಾರ ತಹಸೀಲ್ದಾರ್ ಎಸ್.ಮಹಾಬಲೇಶ್ವರಗೆ ಮನವಿ ಸಲ್ಲಿಸಿತು.

ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾನೂನು ಹಾಗೂ ವಿದ್ಯುಚ್ಛಕ್ತಿ ಖಾಸಗೀಕರಣ ತಿದ್ದುಪಡಿ ಸುಗ್ರೀವಾಜ್ಞೆಗಳು ಶಾಸನಸಭೆಯ ಅನುಮೋದನೆ ಪಡೆಯಲು ವಿಫಲವಾಗಿವೆ. ಆದರೆ, ಸರ್ಕಾರ ಹಿಂಬಾಗಿಲಿನಿಂದ ಮರಳಿ ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿದೆ. ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ವಿಧಾನ ಮಂಡಲ ಮತ್ತು ಜನರ ತೀವ್ರ ವಿರೋಧ ಇರುವಾಗ ಕಾಯ್ದೆ ತಿದ್ದುಪಡಿ ಜಾರಿಗೆ ತರುವ ಅಗತ್ಯವಿಲ್ಲ.ಯಾವುದೇ ಕಾರಣಕ್ಕೂ ಸಚಿವ ಸಂಪುಟ ಈ ಸುಗ್ರೀವಾಜ್ಞೆಗಳನ್ನು ಸಂವಿಧಾನ ಮಾನ್ಯತೆ ನೀಡದೆ ಜಾರಿಗೆ ತರಬಾರದು ಎಂದು ಆಗ್ರಹಿಸಿದರು. ಮುಖಂಡರಾದ ಸಿ.ವಿರೂಪಾಕ್ಷಪ್ಪ, ರಾಘವೆಂದ್ರ ಸಾಲುಮನಿ, ಗುನ್ನಳ್ಳಿ ರಾಘವೇಂದ್ರ, ಮಾಜಿ ಸೈನಿಕ ಎಚ್.ರಮೇಶ್, ಎಂ.ಬಿ.ಅಯ್ಯನಹಳ್ಳಿ ಬಸವರಾಜ, ಹೆಗ್ಡಾಳ್ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net