ಆರೋಗ್ಯದಿಂದ ಸಾಧನೆ ಸಾಧ್ಯ : ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿ

11
Published on

ಮೈಸೂರು: ಶ್ರೀಗುರು ಮಲ್ಲೇಶ್ವರ ಮಹಾಪ್ರಭುಗಳ 126ನೇ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಆಲನಹಳ್ಳಿ ಕುದೇರು ಶಾಖಾ ಮಠದಲ್ಲಿ ಬಸವ ಬಳಗ ಟ್ರಸ್ಟ್ ಪೂರ್ವ ವಲಯದಿಂದ ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಸಾನ್ನಿಧ್ಯ ವಹಿಸಿದ್ದ ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿ ಮಾತನಾಡಿ, ಆರೋಗ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಆರೋಗ್ಯ ಇಲ್ಲದಿದ್ದರೆ ಸಾಧನೆ ಶೂನ್ಯ. ಈ ಒಂದು ಆರೋಗ್ಯ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಬಸವ ಬಳಗ ಪೂರ್ವ ವಲಯ ಟ್ರಸ್ಟ್ ಸದಸ್ಯರು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ವಾಸಿಸುವ ಬಹುತೇಕ ನಿವೃತ್ತ ಸದಸ್ಯರು, ನಿವಾಸಿಗಳು ಆರೋಗ್ಯವನ್ನು ವೃದ್ಧಿಯಾಗಿಸಲು ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದಾರೆ. ನಮ್ಮೆಲ್ಲರ ಶ್ರೀಗುರು ಮಲ್ಲೇಶ್ವರ ಮಹಾಪ್ರಭುಗಳ 126ನೇ ಆರಾಧನ ಮಹೋತ್ಸವ ಕಾರ್ಯಕ್ರಮವು ಭಕ್ತಿ ಪೂರ್ವಕವಾಗಿ ಬೆಳಗ್ಗೆ ಅಭಿಷೇಕದಿಂದ ಪ್ರಾರಂಭ ಮಾಡಿ ದಾಸೋಹ ಹಾಗೂ ಜನಪರ ಸೇವೆಗಳು ನಿರಂತರವಾಗಿ ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ ಎಂದರು

ಶ್ರೀಗುರುಮಲ್ಲೇಶ್ವರ ಮಹಾಪ್ರಭುಗಳವರು ದಾಸೋಹ, ಶೈಕ್ಷಣಿಕ, ಹಾಗೂ ಹಸಿದವರಿಗೆ ದಾಸೋಹ, ಮಾಡುವ ಮುಖಾಂತರ ನಮ್ಮೆಲ್ಲರಿಗೂ ಪ್ರೇರಣೆ ಹಾಗೂ ಅವರ ಆದರ್ಶವನ್ನು ನಾವೆಲ್ಲರೂ ಪಾಲನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಇವತ್ತಿನ ಕಾಲದಲ್ಲಿ ಪ್ರಪಂಚವು ಹಣದ ಹಿಂದೆ ಓಡುತ್ತಿದೆಯೇ ಹೊರತು ತನ್ನ ಆರೋಗ್ಯ ಅಥವಾ ಸಮಾಜಕ್ಕೆ ಸಹಾಯ ಮಾಡುವ ಕೆಲಸಗಳು, ಬಹಳ ಕಡಿಮೆಯಾಗಿದೆ. ಆದ್ದರಿಂದ ಶ್ರೀಗುರು ಮಲ್ಲೇಶ್ವರ ಮಹಾಪ್ರಭುಗಳವರ ಸೇವೆ ಮತ್ತು ಅವರ ಕಲ್ಪನೆ ನಿರಂತರವಾಗಿ ನಾವೆಲ್ಲರೂ ಅಳವಡಿಸಿಕೊಂಡು ಮುಂದೆ ಸಾಗಿದರೆ ನಮ್ಮ ಸಮಾಜ ಮತ್ತು ಶೈಕ್ಷಣಿಕವಾಗಿ ಆರ್ಥಿಕವಾಗಿ ಕುಗ್ಗಿರುವಂತಹ ವ್ಯಕ್ತಿಗಳನ್ನು ಮೇಲೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಒಳ್ಳೆಯ ಮನಸ್ಥಿತಿಯಿಂದ ಪರಸ್ಪರ ಒಬ್ಬರಿಗೊಬ್ಬರು ಕಷ್ಟಕ್ಕೆ ನಿಂತರೆ ನಮ್ಮ ಸಮಾಜ ಮುನ್ನಡೆಯಲು ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾ.ಪು.ಸಿದ್ಧವೀರಪ್ಪ, ಬಿಜೆಪಿ ಮುಖಂಡ ಆಲನಹಳ್ಳಿ ಅಶೋಕ್, ಲೇಖಕ ಚಿಕ್ಕಹಳ್ಳಿ ಪಿ.ದೇವರಾಜು (ದೇಚಿ), ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗದ ಅಧ್ಯಕ್ಷ ಎಂ.ಡಿ.ಶಿವರಾಜು, ಬಸವ ಬಳಗ ಪೂರ್ವ ವಲಯ ಟ್ರಸ್ಟ್ ಅಧ್ಯಕ್ಷ ಎಸ್.ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಲೋಹಿತ್, ಉಪಾಧ್ಯಕ್ಷ ಪಿ.ಟಿ.ಮಹದೇವಸ್ವಾಮಿ, ಶ್ರೀಕಂಠಮೂರ್ತಿ, ಪದಾಧಿಕಾರಿಗಳಾದ ಆನಂದಮೂರ್ತಿ, ಗುರುಪ್ರಸಾದ್, ನಂದೀಶ್, ಶ್ರೀಶೈಲ ಕುಂಬಾರ, ಮಹೇಶ್, ಜಯಶಂಕರ್, ಬಸವರಾಜು, ಪೂಜೆ ಮಾದಪ್ಪ, ನಾಗೇಂದ್ರ, ಸಿದ್ದಪ್ಪ ಸ್ವಾಮಿ, ದೇವಪ್ಪಾಜಿ, ಮಲ್ಲಿಕಾರ್ಜುನ ಸ್ವಾಮಿ, ಪುಟ್ಟಬುದ್ಧಿ, ವಿಶ್ವನಾಥ, ಕುಮಾರಣ್ಣ, ಮಧುಸೂದನ್, ಗಜೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net