ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಸಾಧನೆ : ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಆರು ಪದಕ

sharada
Published on

ಉಳ್ಳಾಲ: ಥೈಲ್ಯಾಂಡ್ ಬ್ಯಾಂಕಾಕ್‌ನ ಫ್ಯಾಶನ್ ಐಲ್ಯಾಂಡ್ ಒಳಾಂಗಣ ಕ್ರೀಡಾಂಗಣದಲ್ಲಿ ಅ.24ರಿಂದ 27ರವರೆಗೆ ನಡೆದ ಥೈಲ್ಯಾಂಡ್ ಓಪನ್ ಇಂಟರ್ ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಐವರು ವಿದ್ಯಾರ್ಥಿಗಳು 6 ಪದಕ ಪಡೆದಿದ್ದಾರೆ.

14 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಕಾನಿಷ್ಕ್ ಶೆಟ್ಟಿ, ಗಣೇಶ್ ಕಲ್ಲಪನಹಳ್ಳಿ ಮತ್ತು ಹರ್ಷಿತ್ ಆನಂದ್ ಪೂಮ್ಸೆ ಗುಂಪಿನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ರಕ್ಷಣ್ ವಿಜಯ್ 1 ಬೆಳ್ಳಿ ಮತ್ತು ವೈಯಕ್ತಿಕ ಪೂಮ್ಸೆಯಲ್ಲಿ 1 ಕಂಚು ಹಾಗೂ ಗಣೇಶ್ ಕಲ್ಲಪನಹಳ್ಳಿ 1 ಕಂಚಿನ ಪದಕ ಪಡೆದಿದ್ದಾರೆ. 17 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ನವನೀತ್ ಅರಿಶಿನಗುಪ್ಪೆ 1 ಬೆಳ್ಳಿ ಮತ್ತು ವೈಯಕ್ತಿಕ ಪೂಮ್ಸೆಯಲ್ಲಿ 1 ಬೆಳ್ಳಿ ಪದಕ ಪಡೆದಿದ್ದಾರೆ.

ಕರ್ನಾಟಕ ಟೇಕ್ವಾಂಡೋ ಅಸೋಸಿಯೇಷನ್‌ನ ಕಾರ್ಯಕಾರಿ ಮಂಡಳಿ ಸದಸ್ಯರಾಗಿರುವ ಶಾರದಾ ಗ್ರೂಪ್ ಆಫ್ ಎಜುಕೇಶನ್‌ಗೆ ಟೇಕ್ವಾಂಡೋ ತರಬೇತುದಾರ ಡಾ.ಗುರುರಾಜ ಇಟಗಿ ತರಬೇತಿ ನೀಡಿದ್ದಾರೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಸಾಧಕ ತಂಡವನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net