

ಕಾರ್ಕಳ: ಬೈಂದೂರಿನಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ 12ನೇ ವಯೋಮಿತಿ ವಿಭಾಗದಲ್ಲಿ ಬೋಳ ಗ್ರಾಮದ ಪ್ರಾಪ್ತಿ ಎಸ್.ಪೂಜಾರಿ ಕುಮಿಟೆಯಲ್ಲಿ 1 ಚಿನ್ನದ ಪದಕ, ಕಟ ವಿಭಾಗದಲ್ಲಿ 1 ಬೆಳ್ಳಿ ಹಾಗೂ 8ವರ್ಷ ವಯೋಮಾನದ ವಿಭಾಗದಲ್ಲಿ ಬೋಳ ಆಯುಷ್ ಎಸ್.ಪೂಜಾರಿ ಕುಮಿಟೆ ಮತ್ತು ಕಟ ವಿಭಾಗದಲ್ಲಿ 2 ಕಂಚಿನ ಪದಕ ಪಡೆದಿದ್ದಾರೆ. ಅವರು ತಾಲೂಕು ಪಂ ಮಾಜಿ ಸದಸ್ಯೆ ಪುಷ್ಪಾ ಸತೀಶ್ ಪೂಜಾರಿ ಹಾಗೂ ಬೋಳ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೋಳ ದಂಪತಿ ಮಕ್ಕಳು. ಕರಾಟೆ ಶಿಕ್ಷಕ ಸತೀಶ್ ಬೆಳ್ಮಣ್ ತರಬೇತಿ ನೀಡಿದ್ದರು.