ದೇವಾಲಯಗಳಿಂದ ಕಳವು ಆರೋಪಿ ಬಂಧನ

arrest
Published on

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೀರ್ಚಾಲು ಸನಿಹದ ರತ್ನಗಿರಿ ಕುದ್ರೆಕ್ಕಾಳಿಯಮ್ಮ ಕ್ಷೇತ್ರ ಸೇರಿದಂತೆ ಎರಡು ಕಡೆ ನಡೆದ ಸರಣಿ ಕಳವಿನ ಆರೋಪಿ, ಮೆಣಸಿನಪಾರೆ ನಿವಾಸಿ ಸತೀಶ ಯಾನೆ ದೀಪಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ದೇವಸ್ಥಾನಗಳಿಂದ ಕಳವುಗೈದ ಘಂಟೆ ಹಾಗೂ ದೀಪಗಳನ್ನು ಬದಿಯಡ್ಕದ ಗುಜರಿ ಅಂಗಡಿಯೊಂದಕ್ಕೆ ಮಾರಾಟ ಮಾಡಲು ಬಂದಾಗ ಆರೋಪಿಯನ್ನು ಬಂಧಿಸಲಾಗಿದೆ. ಘಂಟೆಯ ಬಗ್ಗೆ ಸಂಶಯಗೊಂಡ ಗುಜರಿ ಅಂಗಡಿ ಮಾಲೀಕ ತಕ್ಷಣ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net