ಸಂಪತ್ತು ದಾನದಿಂದ ಪುಣ್ಯ ಸಂಚಯನ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

Sul_Sampathu
Published on

ಸುಳ್ಯ: ಸಂಪತ್ತನ್ನು ಸಮಾಜಕ್ಕೆ ದಾನ ಮಾಡುವುದರಿಂದ ಪುಣ್ಯ ಸಂಚಯನ ಸಾಧ್ಯವಾಗುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದ ಗೌಡ ಹಾಗೂ ಮನೆಯವರು ನೀಡಿರುವ ಬ್ರಹ್ಮರಥದ ಸಮರ್ಪಣೆ ಹಾಗೂ ಭೂ ಸ್ಪರ್ಶ ಕಾರ್ಯಕ್ರಮದಲ್ಲಿ ಗುರುವಾರ ಆಶೀರ್ವಚನ ನೀಡಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಅಭಿನಂದನಾ ಭಾಷಣ ಮಾಡಿದರು. ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು.

ಕುಂಟಾರು ರವೀಶ ತಂತ್ರಿ, ದೇವಸ್ಥಾನದ ತಂತ್ರಿ ಆರೋತ್ ಪದ್ಮನಾಭ ತಂತ್ರಿ, ಆರಿಕೋಡಿ ಶ್ರೀಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ನಿಕಟಪೂರ್ವ ಸಂಸದ, ಮಾಜಿ ಸಚಿವ ಎಸ್.ಅಂಗಾರ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಹಸೀಲ್ದಾರ್ ಮಂಜುಳಾ, ನಪಂ ಸದಸ್ಯೆ ಕಿಶೋರಿ ಶೇಟ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ, ಎಂ.ಮೀನಾಕ್ಷಿ ಗೌಡ, ಎನ್.ಜಯಪ್ರಕಾಶ್ ರೈ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್, ಪ್ರಧಾನ ಕಾರ್ಯದರ್ಶಿಗಳಾದ ಡಿ.ವಿ.ಲೀಲಾಧರ್, ಕೆ.ವಿ.ಹೇಮನಾಥ್, ಕಾರ್ಯದರ್ಶಿ ಹರೀಶ್ ಕಂಜಿಪಿಲಿ, ಡಾ.ಐಶ್ವರ್ಯ ಕೆ.ಸಿ, ಡಾ.ಗೌತಮ್ ಗೌಡ ಎ.ಜಿ. ಉಪಸ್ಥಿತರಿದ್ದರು. ಡಾ.ಕೆ.ವಿ.ಚಿದಾನಂದ, ಶೋಭಾ ಚಿದಾನಂದ ದಂಪತಿಯನ್ನು, ರಥ ಶಿಲ್ಪಿ ರಾಜಗೋಪಾಲ ಆಚಾರ್ಯರನ್ನು ಅಭಿನಂದಿಸಲಾಯಿತು.

ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಸ್ವಾಗತಿಸಿದರು. ಚಂದ್ರಶೇಖರ ಪೇರಾಲು ಅಭಿನಂದನಾ ಪತ್ರ ವಾಚಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಹಾಗೂ ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net