

ಶಶಿ ಕುತ್ಯಾಳ ಈಶ್ವರಮಂಗಲ
ರಸ್ತೆ ಸರ್ಕಲ್‌ಗಳಿಗೆ ಸುತ್ತುಬಳಸಿಯೇ ತಿರುವು ಪಡೆದುಕೊಳ್ಳಬೇಕು ಎಂಬ ನಿಯಮವಿದ್ದು, ಆದರೆ ಕುಂಬ್ರ ಜಂಕ್ಷನ್‌ನಲ್ಲಿ ಮಾತ್ರ ನಿಯಮ ಗಾಳಿಗೆ ತೂರಲಾಗಿದೆ. ಪಕ್ಕದಲ್ಲೇ ಇರುವ ರಿಕ್ಷಾ ನಿಲ್ದಾಣದ ಸ್ಥಳದಲ್ಲಿ ಹೆಚ್ಚಿನ ವಾಹನ ಸವಾರರು ತಿರುವು ಪಡೆದುಕೊಳ್ಳುತ್ತಿದ್ದು, ಇದರಿಮದ ಕುಂಬ್ರ ಜಂಕ್ಷನ್ ಅಪಘಾತ ವಲಯವಾಗಿ ಬದಲಾಗಿದೆ.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರುವ ಕುಂಬ್ರ ಜಂಕ್ಷನ್‌ನಲ್ಲಿ ಕುಂಬ್ರ ಕಟ್ಟೆ ಸರ್ಕಲ್ ಇದ್ದು, ಬೆಳ್ಳಾರೆ ರಸ್ತೆ ಕಡೆಗೆ ಕವಲೊಡೆಯವ ನಡುವೆ ರಿಕ್ಷಾ ಪಾರ್ಕಿಂಗ್ ಸ್ಥಳವಿದೆ. ಸುಳ್ಯದಿಂದ ಬಂದು ಕುಂಬ್ರದಲ್ಲಿ ಬೆಳ್ಳಾರೆ ಕಡೆಗೆ ಸಾಗುವ ವಾಹನಗಳು ಹಾಗೂ ಬೆಳ್ಳಾರೆ- ಮಾಡಾವು ಕಡೆಯಿಂದ ಬಂದು ಸುಳ್ಯ ಕಡೆಗೆ ತೆರಳುವ ವಾಹನಗಳು ಸರ್ಕಲ್ ಮೂಲಕ ತಿರುವು ಪಡೆಯುದೇ ನೇರವಾಗಿ ರಿಕ್ಷಾ ಪಾರ್ಕಿಂಗ್ ಸ್ಥಳವಾಗಿ ಹಾಗೂ ಅಂಗಡಿ ಕಟ್ಟಡಗಳ ಮಧ್ಯ ಭಾಗದಲ್ಲಿ ತಿರುವು ಪಡೆಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.
ತಡೆ ಕಂಬ ಅಳವಡಿಕೆಗೆ ಆಗ್ರಹ: ಸರ್ಕಲ್ ಮೂಲಕವೇ ತಿರುವು ಪಡೆದುಕೊಳ್ಳುವಂತಾಗಲು ಹಾಗೂ ರಿಕ್ಷಾ ನಿಲ್ದಾಣ ಮೂಲಕ ತಿರುವು ಪಡೆಯುವುದು ತಡೆಯುವ ನಿಟ್ಟಿನಲ್ಲಿ ರಿಕ್ಷಾ ನಿಲ್ದಾಣದ ಬದಿಯಲ್ಲಿ ತಡೆ ಕಂಬಳ ಅಳವಡಿಸಬೇಕು ಎಂದು ಎರಡು ವರ್ಷಗಳ ಹಿಂದೆಯೇ ಗ್ರಾಮಸ್ಥರು ಆಗ್ರಹಿಸಿದ್ದು, ಪಂಚಾಯಿತಿ ಅಧಿಕಾರಿಗಳಿಂದ ಪೂರಕ ಭರವಸೆಯೂ ದೊರಕಿತ್ತು. ಪಂಚಾಯಿತಿ ಪ್ರಯತ್ನವೂ ವಿಫಲವಾಗಿದೆ. ರಿಕ್ಷಾ ಪಾರ್ಕಿಂಗ್ ಸ್ಥಳವಾಗಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಹೊರತುಪಡಿಸಿ ಉಳಿದ ವಾಹನಗಳು ವಾಹನಗಳು ಪ್ರವೇಶವಾಗದಂತೆ ತಡೆಗಾಗಿ ಅಳವಡಿಸಿದ್ದ ಕಂಬಗಳು ಈಗ ಇಲ್ಲವಾಗಿವೆ. ಪಟ್ಟು ಬಿಡದ ಪಂಚಾಯಿತಿ ರಿಕ್ಷಾ ಪಾರ್ಕಿಂಗ್ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲು ಮುಂದಾದಾಗ ಕೆಲವರು ವಿರೋಧಿಸಿ ಅಡ್ಡಿಪಡಿಸಿದ್ದರು.
ಕುಂಬ್ರ ಜಂಕ್ಷನ್‌ನಲ್ಲಿ ಅವೈಜ್ಞಾನಿಕ ತಿರುವು ವ್ಯವಸ್ಥೆಯಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಒಳಮೊಗ್ರು ಗ್ರಾಮಸಭೆಯಲ್ಲೂ ಪ್ರಸ್ತಾಪ ಮಾಡಿದ್ದರೂ ಇದುವರೆಗೆ ಪ್ರಯೋಜನ ಶೂನ್ಯವಾಗಿದೆ. ಈ ಭಾಗಕ್ಕೆ ತಡೆ ಕಂಬಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ತಪ್ಪಿಸುವ ಕೆಲಸವಾಗಬೇಕು ಎಂಬುದು ನಮ್ಮ ಆಗ್ರಹ. ಮಹಮ್ಮದ್ ಬೊಳ್ಳಾಡಿ, ಸಾಮಾಜಿಕ ಕಾರ್ಯಕರ್ತ ಈ ಹಿಂದೆ ಗ್ರಾಮ ಸಭೆಯಲ್ಲಿ ಬಂದ ಪ್ರಸ್ತಾಪವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಕಳುಹಿಸಿ ಕೊಡಲಾಗಿತ್ತು. ತಡೆ ಕಂಬಗಳನ್ನು ಅಳವಡಿಕೆ ಕೆಲಸವನ್ನೂ ಮಾಡಲಾಗಿತ್ತು. ಆದರೆ ಅವು ಕೆಲವೇ ಸಮಯದಲ್ಲಿ ಮಾಯವಾಗಿದೆ. ಬ್ಯಾರಿಕೇಡ್ ಅಳವಡಿಸುವುದಕ್ಕೂ ಆಕ್ಷೇಪ ಬಂದಿದೆ. ಹೆದ್ದಾರಿ ಬದಿಯಲ್ಲಿ ಸರ್ಕಲ್ ನಿಯಮ ಪಾಲನೆ ವ್ಯವಸ್ಥೆಗಳನ್ನು ಯಾರು ಮಾಡಬೇಕೆಂಬ ಪ್ರಶ್ನೆಯೂ ಕಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಮಾಡದಿದ್ದರೆ ನಾವೆ ಶೀಘ್ರವಾಗಿ ಅಲ್ಲಿ ಕಂಬಳನ್ನು ಅಳವಡಿಸುತ್ತೇವೆ . ತ್ರಿವೇಣಿ ಪಲ್ಲತ್ತಾರು ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ
---------ೆಟೋ-------
ಐಎಸ್‌ಎಂ-23-ಆಗಸ್ಟ್-1(ಎ)
ಕುಂಬ್ರ ಜಂಕ್ಷನ್‌ನಲ್ಲಿರುವ ಅಪಾಯಕಾರಿ ಸ್ಥಳ.
ಐಎಸ್‌ಎಂ-23-ಆಗಸ್ಟ್-1(ಬಿ)
ತ್ರಿವೇಣಿ ಪಲ್ಲತ್ತಾರು.