ಬೈಕ್ ಸವಾರನ ಪ್ರಾಣ ಕಸಿದ ಕಾರಿನ ರೂಪದಲ್ಲಿ ಬಂದ ಜವರಾಯ ರಾ.ಹೆದ್ದಾರಿ 73 ಯು ಟರ್ನ್ ತೆಗೆದು ಮುಂದುವರಿಯುತ್ತಿದ್ದಾಗ ಅಪಘಾತ

accident-15
Published on


ಮಂಗಳೂರು: ಫರಂಗಿಪೇಟೆ ಸಮೀಪದ ಅರ್ಕುಳ ದ್ವಾರದ ಬಳಿ ಬೈಕ್‌ಗೆ ಓಮ್ನಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.


ಮೇರಮಜಲು ನಿವಾಸಿ ಜೋಸ್ೆ ಜೆರಾಲ್ಡ್ ಮಿರಾಂಡಾ (68) ಮೃತಪಟ್ಟವರು. ಬೆಳಗ್ಗೆ 9.30ಕ್ಕೆ ಜೋಸ್ೆ ಮೇರಮಜಲು ಕಡೆಯಿಂದ ಬೈಕ್‌ನಲ್ಲಿ ಬಂದು ಅರ್ಕುಳ ದ್ವಾರದ ಬಳಿ ಎಡಗಡೆಗೆ ತಿರುಗಿಸಿ ರಂಗಿಪೇಟೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮುಂದೆ ಹೋಗುತ್ತಿದ್ದಂತೆ, ಮಂಗಳೂರು ಕಡೆಯಿಂದ ಬಂದ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾಗಿದೆ. ಇದರಿಂದ ಗಂಭೀರ ಗಾಯಗೊಂಡ ಜೆರಾಲ್ಡ್ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಂಚಾರಿ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net