ಕಾರು ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯ

PTR_21 APR_4
Published on

ಬೆಳ್ತಂಗಡಿ: ಗುರುವಾಯನಕೆರೆ- ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ಸೋಮವಾರ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣಿಸುತ್ತಿದ್ದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಗುರುವಾಯನಕೆರೆ ಕಡೆ ಬರುತ್ತಿದ್ದ ಕಾರಿನಲ್ಲಿದ್ದ ಗೇರುಕಟ್ಟೆಯ ಕುಸುಮಾವತಿ(೭೫), ಭಾಗ್ಯವತಿ (೫೦), ವೈಭವ್(೨೩) ಗಾಯಗೊಂಡವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net