ಪೌರ ಕಾರ್ಮಿಕರಿಗೆ ಸ್ವಂತ ಜಾಗ ಇದ್ದಲ್ಲಿ ಮನೆ ಕಟ್ಟಲು ಅವಕಾಶವಿದೆ. ಜಿ.ಪ್ಲಸ್ ೨ ಮಾದರಿಯಲ್ಲೂ ವಸತಿ ನಿರ್ಮಾಣ ಮಾಡಲು ಅವಕಾಶವಿದೆ. ಎರಡು ತಿಂಗಳ ಅವ?ಯಲ್ಲಿ ನೀಡಿದ ಸೌಲಭ್ಯದ ಕುರಿತು ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಮತ್ತು ಪೌರ ಕಾರ್ಮಿಕರಿಗೆ ನೀಡುವ ಸ್ವಚ್ಛತಾ ಪರಿಕರಗಳ ಮಾಹಿತಿ ಬೇಕು ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.

ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಕುರಿತ ಹಾಗೂ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನಡೆದ ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ತಹಶೀಲ್ದಾರ್, ಪೊಲೀಸ್ ಇಲಾಖೆ ಅ?ಕಾರಿಗಳು ಮತ್ತು ಇತರ ಪ್ರಮುಖ ಅ?ಕಾರಿಗಳು ಗೈರಾಗಿದ್ದರು. ಸದಸ್ಯರ ಪೈಕಿ ಓರ್ವರು ಸಭೆಗೆ ಹಾಜರಾಗಿದ್ದು, ಉಳಿದವರು ಗೈರಾಗಿದ್ದರು. ಪುತ್ತೂರು ಸಮಾಜ ಕಲ್ಯಾಣಾ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸಭಾ ನಡಾವಳಿಯ ಪಾಲನಾ ವರದಿ ಮಂಡಿಸಿದರು.
ಪುತ್ತೂರು ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಬರೀನಾಥ್, ಸುಳ್ಯ ಪ.ಪಂ. ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಕಡಬ ಪ.ಪಂ. ಮುಖ್ಯಾ?ಕಾರಿ ಲೀಲಾವತಿ, ಸುಳ್ಯ ತಾ.ಪಂ. ಕಾರ್ಯನಿರ್ವಹಣಾ?ಕಾರಿ ರಾಜಣ್ಣ, ಸುಳ್ಯ ತಾ.ಪಂ. ಕಂದಾಯ ನಿರೀಕ್ಷಕ ರಂಜನ್, ಬೆಳ್ತಂಗಡಿ ತಾ.ಪಂ. ವಸತಿ ವಿಭಾಗದ ಪ್ರಿಯಾ ಹೆಗ್ಡೆ, ಬೆಳ್ತಂಗಡಿ ಸಮಾಜಕ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ, ಪುತ್ತೂರು ತಾ.ಪಂ. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ವಿಲ್ರೆಡ್ ಲಾರೆನ್ಸ್ ರೋಡ್ರಿಗಸ್, ಸುಳ್ಯ ಸಮಾಜ ಕಲ್ಯಾಣಾ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ, ಕಡಬ ತಾ.ಪಂ. ಸಹಾಯಕ ನಿರ್ದೇಶಕ ಯಶವಂತ್ ಮತ್ತು ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಕಾಯ್ದೆ ಸಮಿತಿ ಸದಸ್ಯೆ ನವ್ಯಶ್ರೀ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು.
ಬಹಳ ಅಗತ್ಯವಾಗಿರುವ ಸಭೆಯನ್ನು ಕಾಟಾಚಾರಕ್ಕೆ ಮಾಡುತ್ತಿಲ್ಲ. ತಾಲೂಕುಮಟ್ಟದ ಅ?ಕಾರಿಗಳು ಯಾರೆಲ್ಲ ಗೈರಾಗಿದ್ದಾರೋ ಅವರಿಗೆ ಪುತ್ತೂರು ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕರು ನೋಟೀಸ್ ಜಾರಿ ಮಾಡಬೇಕು.
| ಸ್ಟೆಲ್ಲಾ ವರ್ಗೀಸ್
ಪುತ್ತೂರು ಸಹಾಯಕ ಆಯುಕ್ತೆ