ವಸತಿ ನಿಲಯದ ನಿಯಮ ಉಲ್ಲಂಘನೆ, ಅಡುಗೆ ಸಹಾಯಕಿ ಅಮಾನತ್ತಿಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ABVP PROTEST HASTEL STAFF AGAINEST
ವಿಜಯಪುರ ನಗರದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತದಾರ್‌ಗೆ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. ಶ್ರೀಹರ್ಷ ನಾಯಕ, ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ, ನಗರ ಸಂಘಟನಾ ಕಾರ್ಯ ಶಶಿಕಾಂತ ರಾಕಲೆ ಮತ್ತಿತರರಿದ್ದಾರೆ.
Published on

ವಿಜಯಪುರ: ವಸತಿ ನಿಲಯದ ನಿಯಮ ಉಲ್ಲಂಘಿಸಿ ಬಾಲಕಿಯರನ್ನು ಹೊರಗಡೆ ಕರೆದೊಯ್ದು ಜನ್ಮ ದಿನ ಆಚರಿಸಿಕೊಂಡ ವಸತಿ ನಿಲಯದ ಅಡುಗೆ ಸಹಾಯಕಿಯನ್ನು ಅಮಾನತ್ತುಗೊಳಿಸಲು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ಅಡುಗೆ ಸಹಾಯಕಿ ರಿಜ್ವಾನ್ ಮುಲ್ಲಾ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಲಾಯಿತು.

ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀಹರ್ಷ ನಾಯಕ, ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ, ನಗರ ಸಂಘಟನಾ ಕಾರ್ಯ ಶಶಿಕಾಂತ ರಾಕಲೆ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಐಶ್ವರ್ಯ ಆಸಂಗಿ, ಸ್ನೇಹ ಹಿರೇಮಠ, ಪ್ರವೀಣ ಬಿರಾದಾರ, ನಗರ ತಾಂತ್ರಿಕ ಪ್ರಮುಖರಾದ ಚೇತನ ಕೊರವಾರ, ದಾನಮ್ಮ ಹೊಸಮನಿ, ಸುನಿಲ ರಾಠೋಡ, ಬಾಲಾಜಿ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net