ರಾಯಚೂರು ನಗರದಲ್ಲಿ ಮಾ.೦೬ ರಂದು ಜರುಗಿದ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಽಕಾರಿಗಳು ಗೈರು ಹಾಗೂ ಅಽವೇಶನದಲ್ಲಿ ಭಾಗವಹಿಸಿದ್ದ ಜನಪ್ರತಿನಿಽಗಳು ಸಮ್ಮೇಳನಕ್ಕೆ ಸಂದೇಶಗಳನ್ನು ಕಳಿಸದೇ ಇರುವುದು ಕನ್ನಡಕ್ಕೆ ಆದ ಅಗೌರವವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಜನಪ್ರತಿನಿಽಗಳು ಹಾಗೂ ಜಿಲ್ಲೆಯ ಉನ್ನತ ಅಽಕಾರಿಗಳನ್ನು ಆಹ್ವಾನಿಸಲಾಗಿತ್ತು. ಜಿಲ್ಲಾಽಕಾರಿಗಳು, ಜಿಪಂ ಸಿಇಓ,ಎಸ್ಟಿ , ತಹಸೀಲ್ದಾರರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಽಕಾರಿಗಳು ಸಮ್ಮೇಳನಕ್ಕೆ ಆಗಮಿಸದೇ ಕನ್ನಡ ಭಾಷೆ ಬಗ್ಗೆ ತಾತ್ಸಾರ ಮನೋಭಾವನೆಯನ್ನು ತೋರಿದ್ದಾರೆ ಎಂದು ತಿಳಿಸಿದರು.
ಉನ್ನತ ಅಽಕಾರಿಗಳು ತಾವು ಆಗಮಿಸದೇ ಇರುವ ಪರಿಸ್ಥಿತಿ ಉಂಟಾಗಿದ್ದರೆ, ತಮ್ಮ ಪರವಾಗಿ ಬೇರೆ
ಅಽಕಾರಿಗಳನ್ನು ಕಳಿಸಬೇಕಿತ್ತು. ಆದರೆ ಸಮ್ಮೇಳನಕ್ಕೆ ಯಾವ ಅಽಕಾರಿಯೂ ಬಾರದೆ ಇರುವುದು ಖಂಡನೀಯ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರನ್ನು ಹೊರತುಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ನಗರ ಶಾಸಕ ಡಾ.ಶಿವರಾಜ್, ಪಾಟೀಲ್, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಸೇರಿದಂತೆ ಜಿಲ್ಲೆಯ ಇತರೆ ಜನಪ್ರತಿನಿಽಗಳು ಸಮ್ಮಳನಕ್ಕೆ ಶುಭಕೋರುವ ಸಂದೇಶವನ್ನು ಕಳಿಸದೇ ನಿರಾಸಕ್ತಿ ತೋರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಆಸೀ-ï, ಜಿಲ್ಲಾ ಖಜಾಂಚಿ, ತಾಲೂಕು ಉಪಾಧ್ಯಕ್ಷರಾದ ಮಹ್ಮದ್ ಅಜೀಜ್, ರಮೇಶರಾವ್ ಕಲ್ಲೂರಕರ್, ನಗರ ಉಪಾಧ್ಯಕ್ಷರಾದ ವೀರಭದ್ರಯ್ಯಸ್ವಾಮಿ, ಮಹೇಂದ್ರಸಿAಗ್, ಮಹ್ಮದ್ ಆಸೀ-ï ಇದ್ದರು.