

ಸುಳ್ಯ: ಕೆವಿಜಿ ಪಾಲಿಟೆಕ್ನಿಕ್‌ನ 2025-26ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸ್ವಾಗತ, ಅಭಿವಿನ್ಯಾಸ ಕಾರ್ಯಕ್ರಮ ನಡೆಯಿತು.
ಎ.ಒ.ಎಲ್.ಇ ಕಮಿಟಿ ಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಉದ್ಘಾಟಿಸಿದರು. ವಿದ್ಯಾಸಂಸ್ಥೆಗಳ ಆಡಳಿತ ಅಧಿಕಾರಿ ಭವಾನಿ ಶಂಕರ ಅಡ್ತಲೆ ಮಾತನಾಡಿದರು. ಪ್ರಾಂಶುಪಾಲ ಅಣ್ಣಯ್ಯ ಕೆ. ಅಧ್ಯಕ್ಷತೆ ವಹಿಸಿದ್ದರು. ಅಟೋಮೊಬೈಲ್ ವಿಭಾಗ ಮುಖ್ಯಸ್ಥ ಎಂ.ಎನ್.ಚಂದ್ರಶೇಖರ, ಮೆಕಾನಿಕಲ್ ವಿಭಾಗ ಮುಖ್ಯಸ್ಥ ಯತೀಶ್ ಕೆ.ಎನ್., ಕಚೇರಿ ಅಧೀಕ್ಷಕ ಧನಂಜಯ ಕಲ್ಲುಗದ್ದೆ ಉಪಸ್ಥಿತರಿದ್ದರು. ಉಪನ್ಯಾಸಕ ದೀಕ್ಷಿತ್ ಕುಮಾರ್ ಪ್ರಾರ್ಥಿಸಿದರು. ಉಪಪ್ರಾಂಶುಪಾಲ ಹರೀಶ್‌ಕುಮಾರ್ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ. ವಂದಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಭವಾನಿ ಶಂಕರ ಅಡ್ತಲೆ ಅವರನ್ನು ಗೌರವಿಸಲಾಯಿತು.