

ಮುಂಬೈ: ಬಿಗ್ ಬಾಸ್ ಹಿಂದಿಯ 17 ನೇ ಸೀಸನ್ ಇತ್ತೀಚೆಗಷ್ಟೇ ಮುಗಿದಿದೆ. ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ವಿಜೇತರಾಗಿ ಹೊರಹೊಮ್ಮಿದರೆ, ನಟ ಅಭಿಷೇಕ್ ಕುಮಾರ್ ರನ್ನರ್ ಅಪ್ ಆದರು. ನಾಯಕಿ ಮನ್ನಾರಾ ಚೋಪ್ರಾ, ನಟಿ ಅಂಕಿತಾ ಲೋಖಂಡೆ ಮತ್ತು ಹೈದರಾಬಾದ್ ಹುಡುಗ ಅರುಣ್ ನಂತರದ ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದಾರೆ. ಅವರೆಲ್ಲರೂ ಈಗ ತಮ್ಮ ಖ್ಯಾತಿ ಮತ್ತು ಯಶಸ್ಸನ್ನು ಆನಂದಿಸುತ್ತಿದ್ದಾರೆ. ರನ್ನರ್ ಅಪ್ ಆಗಿದ್ದ ಅಭಿಷೇಕ್ ಮನೆಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದರು. ಅದಕ್ಕೆ ಕಾರಣ ಅವರ ಮಾಜಿ ಗೆಳತಿ ನಟಿ ಇಶಾ. ತನ್ನ ಬಾಯ್‌ಫ್ರೆಂಡ್ ಸಮರ್ಧ್‌ನನ್ನು ಆಕೆಯ ಜೊತೆಗೆ ಬಿಗ್‌ಬಾಸ್ ಮನೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಕಾರ್ತಿಕ್ ಮಹೇಶ್ ಎಕ್ಸ್ಕ್ಲೂಸಿವ್ ಸಂದರ್ಶನ
ಪ್ರೇಮಿಗಳಿಗೆ ಜನ ಛೀಮಾರಿ: ಕ್ಯಾಮೆರಾಗಳಿರುವುದನ್ನು ಮರೆತು ಇಶಾ-ಸಮರ್ಥ್ ಮಾಡಿದ ಹುಚ್ಚಾಟಗಳಿಗೆ ಜನರು ಛೀಮಾರಿ ಹಾಕಿದ್ದಾರೆ. ಇಶಾಳ ಮಾಜಿ ಗೆಳೆಯ ಅಭಿಷೇಕ್ ಗೆ ಮಾನಸಿಕವಾಗಿ ಜರ್ಜರಿತರಾಗುವಂತೆ ಮಾಡಿದ್ದಾರೆ. ಆತನ ಆರೋಗ್ಯದ ಸಮಸ್ಯೆಯನ್ನು ಅಣಕಿಸಿ ಕಿಡಿಗೇಡಿ ಕೃತ್ಯಗಳನ್ನು ಎಸಗಿದ್ದಾರೆ. ಅವರ ಮಾತುಗಳನ್ನು ಸಹಿಸಲಾಗದ ಅಭಿಷೇಕ್ ಒಂದು ಹಂತದಲ್ಲಿ ಸಮರ್ಥ್ ಕೆನ್ನೆಗೆ ಭಾರಿಸಿದ್ದಾನೆ.
ತಾಜಾ ಸಂದರ್ಶನವೊಂದರಲ್ಲಿ, ಇಶಾ ಜೊತೆಗಿನ ಬ್ರೇಕಪ್ ಕುರಿತು ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. "ನಾನು ನನ್ನ ಜೀವನದಲ್ಲಿ ಇಶಾ ಮಾಳವೀಯ ಅಧ್ಯಾಯವನ್ನು ಕೊನೆಗೊಳಿಸುತ್ತಿದ್ದೇನೆ. ಫಿನಾಲೆಯ ದಿನ ಬಿಗ್ ಬಾಸ್.. ಮನೆಯ ಲೈಟ್ ಆಫ್ ಮಾಡಿ ಸ್ಟೇಜ್ ಮೇಲೆ ಬಂದಾಗ ಇಶಾ ಜೊತೆಗಿನ ಜಗಳವನ್ನೆಲ್ಲಾ ಮರೆಯಬೇಕು ಎಂದುಕೊಂಡಿದ್ದೆ. ಯಾವಯಾವುದರ ಬಗ್ಗೆಯೋ ಯೋಚಿಸಿ ನನ್ನ ಮನಸ್ಸನ್ನು ಹಾಳು ಮಾಡಿಕೊಳ್ಳಲು ನಾನು ಬಯಸಲಿಲ್ಲ.
ಅದೇ ನನಗೆ ದೊಡ್ಡ ಚಿಕಿತ್ಸೆ: ನಾನು ಜೀವನ ಮತ್ತು ವೃತ್ತಿಜೀವನದಲ್ಲಿ ಒಂದು ಹೆಜ್ಜೆ ಮುಂದಿಡಲು ತೀರ್ಮಾನಿಸಿದ್ದೆ. ನನ್ನ ಕುರಿತಾಗಲಿ, ನನಗೆ ಸಂಬಂಧಿಸಿದ ವಿಷಯಗಳ ಕುರಿತಾಗಲು ಮಾತನಾಡಬೇಕೆಂದು ಯೋಚಿಸಲೂ ಇಲ್ಲ. ಆರಂಭದಲ್ಲಿ ನಾನು ನನ್ನ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಚಿಕಿತ್ಸೆ ಪಡೆಯಲು ಬಯಸಿದ್ದೆ. ಆದರೆ ಇಶಾ ನನ್ನ ಬಾಳಿಂದ ಹೊರಕ್ಕೆ ಹೋದಳೋ ಆ ನಂತರ ನನ್ನ ಜೀವನ ಶಾಂತಿಯುತವಾಗಿದೆ. ಪ್ರೀತಿ ಎಂದರೇನೇ ಭಯವಾಗುತ್ತದೆ. ಇನ್ನು ಮುಂದೆ ಯಾವುದೇ ಸಂಬಂಧವನ್ನು ಬೆಳೆಸುವ ಮುನ್ನ ಒಂದಲ್ಲ, ಎರಡು ಬಾರಿ ಯೋಚಿಸುತ್ತೇನೆ ಎಂದು ಅಭಿಷೇಕ್ ಹೇಳಿದ್ದಾರೆ.