

ಕಾಸರಗೋಡು: ಉಪ್ಪಳ ಮಣ್ಣಂಗುಳಿ ನಿವಾಸಿ, ಮಣ್ಣಂಗುಳಿಯ ಫ್ಲಾೃಟ್‌ನಲ್ಲಿ ವಾಸಿಸುತ್ತಿದ್ದ ಅಬ್ದುಲ್ ಮುತ್ತಲೀಬ್ ಕೊಲೆ ಪ್ರಕರಣದ ಆರೋಪಿ, ಭದ್ರಾವತಿ ನಿವಾಸಿ ಸಯ್ಯದ್ ಆಸಿಫ್ ಎಂಬಾತನನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ(ತೃತೀಯ)ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ. 2013ರ ಅ.24ರಂದು ತಡರಾತ್ರಿ ಉಪ್ಪಳ ಮಣ್ಣಂಗುಳಿ ಫ್ಲಾೃಟ್ ಸನಿಹ ಮುತ್ತಲೀಬ್ ಕೊಲೆ ನಡೆದಿದ್ದು, ಈ ಬಗ್ಗೆ ಕಾಳಿಯಾ ರಫೀಕ್ ಹಾಗೂ ಇತರ ಐವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪ್ರಥಮ ಆರೋಪಿ ಕಾಲಿಯಾ ರಫೀಕ್ ಹಾಗೂ ಎರಡನೇ ಆರೋಪಿ ಶಂಸುದ್ದೀನ್ ಎಂಬುವರಿಗೆ ಈಗಾಗಲೇ ಶಿಕ್ಷೆ ವಿಧಿಸಲಾಗಿದೆ. ಮೂರು ಮತ್ತು ನಾಲ್ಕನೇ ಆರೋಪಿಗಳನ್ನು ಈ ಹಿಂದೆ ಖುಲಾಸೆಗೊಳಿಸಲಾಗಿದ್ದು, ಐದನೇ ಆರೋಪಿ ಸಯ್ಯದ್ ಆಸಿಫ್ ಕೂಡ ಖುಲಾಸೆಗೊಂಡಿದ್ದಾನೆ.