

ಸಾಗರ: ಅಂಗಡಿಗೆ ಹೋಗಿ ಮನೆಗೆ ಹಿಂದಿರುತ್ತಿದ್ದಾಗ ವೃದ್ಧೆಯ ಮಾಂಗಲ್ಯ ಸರವನ್ನು ಶುಕ್ರವಾರ ಕಿತ್ತುಕೊಂಡು ಹೋಗಲಾಗಿದೆ.
ವಿನೋಬಾನಗರದ ವಿಜಯಮ್ಮ (65) ಎಂಬುವವರು ಬೆಳಗ್ಗೆ ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳಿದ್ದಾರೆ. ವಿಜಯಮ್ಮ ಅವರು ವಿಳಾಸ ಹೇಳುತ್ತಿದ್ದಾಗ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಆಗ ವಿಜಯಮ್ಮ ಅವರು ತಮ್ಮ ಶಕ್ತಿಯನ್ನು ಉಪಯೋಗಿಸಿ ಮಾಂಗಲ್ಯ ಸರ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದಾಗ ಅವರ ಕುತ್ತಿಗೆ ಮತ್ತು ಕೆನ್ನೆ ಭಾಗಕ್ಕೆ ಗಾಯವಾಗಿದೆ. ಕಳ್ಳರು ಕೊನೆಗೂ ಮಾಂಗಲ್ಯ ಸರದ ಒಂದು ತುಂಡು ಹರಿದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಮ್ಮ ಅವರ ಹೋರಾಟದ ಲವಾಗಿ 40 ಗ್ರಾಂ ಮಾಂಗಲ್ಯ ಸರದಲ್ಲಿ 8 ಗ್ರಾಂ ಮಾತ್ರ ಕಳ್ಳರ ಪಾಲಾಗಿದೆ.