ICC ಹಾಲ್​ ಆಫ್​ ಫೇಮ್​ ಗೌರವ ಪಡೆದ ABD; ಮತ್ತೊಮ್ಮೆ ಕನ್ನಡಿಗರ ಮನಗೆದ್ದ MR. 360

AB Devilliers
Published on

ಬೆಂಗಳೂರು: ವಿಭಿನ್ನ ಶೈಲಿಯ ಸ್ಫೋಟಕ ಬ್ಯಾಟಿಂಗ್​​ಗೆ ಹೆಸರುವಾಸಿಯಾಗಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್​ (ABD) ವಿಶೇಷ ಗೌರವಕ್ಕೆ ಭಾಜನರಾಗಿದ್ದು, ಐಸಿಸಿ ಅವರನ್ನು ಸತ್ಕರಿಸಿದೆ.  ಎಬಿ ಡಿವಿಲಿಯರ್ಸ್ (ABD) ಅವರಿಗೆ ಐಸಿಸಿ  ಹಾಲ್ ಆಫ್ ಫೇಮ್ (ICC Hall Of Fame) ಗೌರವ ನೀಡಿದೆ. ಈ ಗೌರವದೊಂದಿಗೆ ಎಬಿಡಿಗೆ ಹಾಲ್ ಆಫ್ ಫೇಮ್ ಕ್ಯಾಪ್ ಅನ್ನು ಐಸಿಸಿ (ICC)  ಕಳುಹಿಸಿಕೊಟ್ಟಿದೆ.

ಈ ಪೋಟೋವನ್ನು ಎಬಿ ಡಿವಿಲಿಯರ್ಸ್​ (ABD) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆರ್​ಸಿಬಿ (RCB) ಫ್ರಾಂಚೈಸಿ ಕೂಡ ಗೌರವಗಳು ಬರುತ್ತವೆ ಹೋಗುತ್ತವೆ. ಆದರೆ, ಈ ಫ್ರೇಮ್ ಶಾಶ್ವತವಾಗಿ ಉಳಿಯುತ್ತದೆ ಎಂದು ಪೋಸ್ಟ್ ಮಾಡಿ ಶುಭಕೋರಿದೆ. ಇದಕ್ಕೆ ಎಬಿಡಿ (ABD) ನೀಡಿರುವ ಪ್ರತಿಕ್ರಿಯೆ ಕನ್ನಡಿಗರ ಮನ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ABD

ಆರ್​ಸಿಬಿ ಹಂಚಿಕೊಂಡಿದ್ದ ಫೋಟೋಗೆ ಎಬಿ ಡಿವಿಲಿಯರ್ಸ್ (ABD) "ಧನ್ಯವಾದಗಳು" ಎಂದು ಕನ್ನಡದಲ್ಲೇ ಪ್ರತಿಕ್ರಿಯೆ ನೀಡುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಆರ್​ಸಿಬಿ (RCB) ತಂಡದ ಮಾಜಿ ಆಟಗಾರನ ಕನ್ನಡ ಪ್ರೀತಿಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮತ್ತೆ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವಂತೆ ಅನೇಕ ಅಭಿಮಾನಿಗಳು ಎಬಿಡಿ ಅವರಲ್ಲಿ ಮನವಿ ಮಾಡಿದ್ದಾರೆ.

ಆರ್​ಸಿಬಿ ಪರ 157 ಪಂದ್ಯಗಳನ್ನು ಆಡಿರುವ ಎಬಿ ಡಿವಿಲಿಯರ್ಸ್​ 4522 ರನ್ ಗಳಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು ಮುಂದಿನ ದಿನಗಳಲ್ಲಿ ಆರ್​ಸಿಬಿ ಕೋಚಿಂಗ್ ಸ್ಟಾಫ್​ ಆಗಿ ಕಮ್​ಬ್ಯಾಕ್​ ಮಾಡಬಹುದು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net