

ಬಂಟ್ವಾಳ: ತುಳುನಾಡಿನ ಆಚರಣೆಗಳು ತನ್ನದೇ ಆದ ವೈಶಿಷ್ಟೃಗಳಿಂದ ವಿಶ್ವಕ್ಕೆ ಮಾದರಿ. ಇಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ ತನ್ನದೇ ಆದ ಪ್ರಾಮುಖ್ಯತೆ ಪಡೆದಿದ್ದು, ಇಂದು ನಶಿಸಿ ಹೋಗುವ ಹಂತದಲ್ಲಿದೆ. ಅದನ್ನು ಉಳಿಸುವ ದೃಷ್ಟಿಯಿಂದ ಯುವ ಜನಾಂಗಕ್ಕೆ ತಿಳಿ ಹೇಳಲು ಆಟಿದ ಲೇಸು ಮುಂತಾದ ಕಾರ್ಯಕ್ರಮಗಳು ಸಹಕಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಹೇಳಿದರು.
ಕಾಡಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಗ್ಗ ವಲಯದ ಕಾಡಬೆಟ್ಟು ಒಕ್ಕೂಟ ಮತ್ತು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಆಯೋಜಿಸಲಾಗಿದ್ದ ಆಟಿದ ಲೇಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಶೃತಾಂಜನ್ ಜೈನ್ ಆಲಂಪುರಿ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗ ನಿರ್ದೇಶಕ ಮಹಾಬಲ ಕುಲಾಲ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಉದ್ಯಮಿ ಸುಜಿತ್ ಕುಮಾರ್ ಜೈನ್ ಪಿಲಿಂಗಾಲು, ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ನಾವುರ, ತಾಲೂಕು ಕೃಷಿ ಮೇಲ್ವಿಚಾರಕ ಭಾಸ್ಕರ್, ಯೋಜನೆಯ ವಗ್ಗ ವಲಯ ಅಧ್ಯಕ್ಷ ಉಮೇಶ್, ಉದ್ಯಮಿ ನಾಗೇಶ್ ಮಧ್ವ, ತಾಲೂಕು ಎಂಇಎಸ್ ಯೋಜನಾಧಿಕಾರಿ ಪ್ರೇಮನಾಥ್, ಶೌರ್ಯ ವಿಪತ್ತು ಘಟಕ ಬಂಟ್ವಾಳ ತಾಲೂಕು ಕ್ಯಾಪ್ಟನ್ ಪ್ರಕಾಶ್, ಕಾಡಬೆಟ್ಟು ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಪಿಲಿಂಗಾಲು, ಜ್ಞಾನದೀಪ ಶಿಕ್ಷಕಿ ಹರಿಣಾಕ್ಷಿ, ವಗ್ಗ ವಲಯ ಮೇಲ್ವಿಚಾರಕಿ ಸವಿತಾ, ಕಾಡಬೆಟ್ಟು ಶೌರ್ಯ ವಿಪತ್ತು ಘಟಕ ಪ್ರತಿನಿಧಿ ಪ್ರವೀಣ್ ಉಪಸ್ಥಿತರಿದ್ದರು. ಲೀಲಾವತಿ ಸ್ವಾಗತಿಸಿದರು. ರೇಖಾ ಪಿ. ವಂದಿಸಿದರು. ನಿತಿನ್ ಮಧ್ವ ಕಾರ್ಯಕ್ರಮ ನಿರೂಪಿಸಿದರು.