ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಆರಾಧ್ಯ ಬಚ್ಚನ್; ವೈರಲ್ ಆದ ಫೋಟೋಗಳು

Aish (1)
Published on

ಮುಂಬೈ: ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಬಿ-ಟೌನ್‌ನ ಜನಪ್ರಿಯ ತಾಯಿ-ಮಗಳ ಜೋಡಿ. ಆದರೆ ಐಶ್ವರ್ಯಾ ರೈ ತನ್ನ ಮಗಳ ಹೇರ್ ಸ್ಟೈಲ್ ಅನ್ನು ಬದಲಾಯಿಸದಿದ್ದಕ್ಕಾಗಿ ಆಗಾಗ್ಗೆ ಜನರು ಲೇವಡಿ ಮಾಡುತ್ತಿರುತ್ತಾರೆ. ಆರಾಧ್ಯ ಬಚ್ಚನ್ ತನ್ನ ಕೇಶವಿನ್ಯಾಸಕ್ಕಾಗಿ ಅಪಹಾಸ್ಯಕ್ಕೊಳಗಾಗಿದ್ದಾರೆ. ಚಿಕ್ಕಂದಿನಿಂದಲೂ ಇಲ್ಲಿಯವರೆಗೂ ಜನರು ಆರಾಧ್ಯಳನ್ನು ಪ್ರತಿ ಸಂದರ್ಭದಲ್ಲೂ ಒಂದೇ ಹೇರ್ ಸ್ಟೈಲ್ ನಲ್ಲಿ ನೋಡಿದ್ದಾರೆ. ಆದರೆ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇದೆ. ಏನಂತೀರಾ?

ಗಣೇಶ ಚತುರ್ಥಿಯಂದು ನೃತ್ಯ ಮಾಡಿದ ಆರಾಧ್ಯ

ಆರಾಧ್ಯ ಬಚ್ಚನ್ ಬಗ್ಗೆ ಇಂತಹದೊಂದು ಸುದ್ದಿ ಹೊರಬಿದ್ದಿದ್ದು , ಅವರ ಅಭಿಮಾನಿಗಳು ಇದನ್ನು ತಿಳಿಯಲು ಕಾಯುತ್ತಿದ್ದಾರೆ. ಶಾಲೆಯಲ್ಲಿ ಗಣೇಶ ಚತುರ್ಥಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರಾಧ್ಯ ಭಾಗವಹಿಸಿದ್ದರು. ಗೆಳೆಯರೊಂದಿಗೆ ಗಣಪತಿ ಬಪ್ಪನನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಬಚ್ಚನ್ ಕುಟುಂಬದ ಈ ಕೂಸು ಬಿಳಿ ಸೂಟ್ ಮತ್ತು ಕೆಂಪು ದುಪ್ಪಟ್ಟದಲ್ಲಿ ಕಾಣಿಸಿಕೊಂಡಿದ್ದಳು.

ಆರಾಧ್ಯ ಕೆಲವು ಚಿತ್ರಗಳನ್ನು ಆರಾಧ್ಯ ಅಭಿಮಾನಿಗಳ ಪೇಜ್​​​ ಹಂಚಿಕೊಂಡಿದೆ . ಇದರಲ್ಲಿ ಆಕೆಯ ಲುಕ್ ಹಾಗೂ ಡ್ಯಾನ್ಸ್, ಹೇರ್ ಸ್ಟೈಲ್ ಜನರ ಗಮನ ಸೆಳೆದಿದೆ. ಈ ಬಾರಿ ಆರಾಧ್ಯ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಲುಕ್ ನಲ್ಲಿ ಹೆಚ್ಚಿನ ಬದಲಾವಣೆ ಇಲ್ಲ, ಪೋನಿಟೇಲ್ ಕಟ್ಟಿಕೊಂಡು ಬಿಳಿ ಬಣ್ಣದ ಹೇರ್ ಬ್ಯಾಂಡ್ ಹಾಕಿಕೊಂಡಿದ್ದಾರೆ.

ಅಭಿಮಾನಿಗಳು ಏನಂದ್ರು...?

ಮಾಮೂಲಿಗಿಂತ ವಿಭಿನ್ನ ಶೈಲಿಯಲ್ಲಿ ಆರಾಧ್ಯ ಅವರನ್ನು ನೋಡಿದ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 'ಅದ್ಭುತ', 'ಸುಂದರ' ಎಂದು ಹಾಡಿ ಹೊಗಳಿದ್ದಾರೆ. ಇನ್ನೂ ಕೆಲವರು ಅವರನ್ನು ಮತ್ತೆ ಟ್ರೋಲ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net