ಬನಿಯನ್, ಶಾರ್ಟ್ಸ್ ಧರಿಸಿ ಅಮೀರ್ ಖಾನ್ ಮಗಳ ಕೈ ಹಿಡಿದ ನೂಪುರ್; ಅಯ್ಯೋ ಇದ್ಯಾವ​ ಸ್ಟೈಲ್ ಗುರು? ಎಂದ್ರು ನೆಟ್ಟಿಗರು

Aamir Khan Son In Law
Published on

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರಿ ಐರಾ ಖಾನ್ ತನ್ನ ಗೆಳೆಯ ಫಿಟ್ನೆಸ್ ಕೋಚ್ ನೂಪುರ್ ಶಿಖರೆ ಅವರನ್ನು ಬುಧವಾರ ಅದ್ಧೂರಿಯಾಗಿ ವಿವಾಹವಾದರು. ಆದರೆ, ಈ ಮದುವೆ ವಿಡಿಯೋ ವೈರಲ್ ಆಗುತ್ತಿದ್ದಂತೆ ವರನ ವೇಷಭೂಷಣ ನೋಡಿ ನೆಟ್ಟಿಗರು ಟ್ರೋಲ್​​ ಮಾಡುತ್ತಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಟಲಿಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. 2024 ಜನವರಿ 3ರಂದು, ಐರಾ ಖಾನ್ ತನ್ನ ಗೆಳೆಯ ಫಿಟ್ನೆಸ್ ಕೋಚ್ ನೂಪುರ್ ಶಿಖರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂಪುರ್ ಶಿಖರ್ ತನ್ನ ಮದುವೆ ಸಮಾರಂಭಕ್ಕೆ ಬನಿಯನ್ ಮತ್ತು ಶಾರ್ಟ್ಸ್ ಧರಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ.

ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅಮೀರ್ ಖಾನ್ ಅವರ ಪುತ್ರಿ ಐರಾ ಖಾನ್ ಮತ್ತು ಖ್ಯಾತ ಫಿಟ್ನೆಸ್ ತರಬೇತುದಾರ ನೂಪುರ್ ಶಿಕ್ರೆ ವಿವಾಹವಾದರು. ಅಮೀರ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರ ಇಬ್ಬರು ಮಕ್ಕಳಾದ ಜುನೈದ್ ಖಾನ್ ಮತ್ತು ಆಜಾದ್ ಖಾನ್ ಕೂಡ ಮದುವೆಯಲ್ಲಿ ಭಾಗವಹಿಸಿದ್ದರು.

ಮದುವೆ ಸ್ಥಳವನ್ನು ತಲುಪುವ ಮೊದಲು, ನೂಪುರ್ ಶಿಕ್ರೆ ಮುಂಬೈ ರಸ್ತೆಗಳಲ್ಲಿ 8 ಕಿಲೋಮೀಟರ್ ಜಾಗಿಂಗ್ ಮಾಡಿದರು ಮತ್ತು ಪಂಚತಾರಾ ಹೋಟೆಲ್‌ನ ಹೊರಗೆ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಧೋಲ್ ಬೀಟ್‌ಗೆ ನೃತ್ಯ ಮಾಡಿದರು. ನಂತರ ವೇದಿಕೆಯಲ್ಲಿ ಅತಿಥಿಗಳ ನಡುವೆ ನ್ಯಾಯಾಲಯದ ದಾಖಲೆಗಳಿಗೆ ಸಹಿ ಮಾಡುವ ಮೂಲಕ ಅವರು ತಮ್ಮ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡರು.

ಐರಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರೆ, ನೂಪುರ್ ಶಿಕ್ರೆ ಅವರು ಬನಿಯನ್ ಮತ್ತು ಶಾರ್ಟ್ಸ್ ಧರಿಸಿ ವೇದಿಕೆ ಮೇಲೆ ಬಂದರು. ಈ ವಿಡಿಯೋ ವೈರಲ್ ಆದ ನಂತರ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಶುಭ ಸಮಾರಂಭಗಳಿಗೆ ಒಂದಿಷ್ಟು ಗೌರವ ಕೊಡಿ. ಆದರೆ ಮದುವೆ ನೋಂದಣಿಯಾದಾಗ ನೂಪುರ್ ಬಟ್ಟೆ ಬದಲಾಯಿಸಿದ್ದ. ನೀಲಿ ಬಣ್ಣದ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅಮೀರ್ ಖಾನ್‌ಗೆ ತರಬೇತಿ ನೀಡಲು ಬಂದ ನೂಪುರ್ ಶಿಕ್ರೆ ಅವರನ್ನು ಐರಾ ಖಾನ್ ಭೇಟಿಯಾದರು. ಆ ನಂತರ ಇಬ್ಬರು ಡೇಟಿಂಗ್ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net