More

    ಗೇಮ್​ ಆಫ್ ಥ್ರೋನ್ಸ್ ರೀತಿಯಲ್ಲಿ ಮಹಾಭಾರತ; ನೆಟ್​ಫ್ಲಿಕ್ಸ್​ನಲ್ಲಿ ಆಮೀರ್ ಮಹಾಸರಣಿ!

    ಈಗಾಗಲೇ ಗೊತ್ತಿರುವಂತೆ ಮಹಾಭಾರತವನ್ನು ತೆರೆಮೇಲೆ ತರಬೇಕೆಂಬುದು ಆಮೀರ್ ಖಾನ್​ ಅವರ ದಶಕದ ಕನಸು. ಈಗಾಗಲೇ ಆ ಸಿನಿಮಾ ಬಗ್ಗೆ ಒಂದಲ್ಲ ಒಂದು ರೀತಿ ಸದಾ ಚರ್ಚೆಯಲ್ಲಿರುತ್ತಾರವರು. ದೊಡ್ಡ ದೊಡ್ಡ ಕಲಾವಿದರ ದಂಡೂ ಈ ಸಿನಿಮಾದಲ್ಲಿರಲಿದೆ ಎಂಬುದು ಬಹಿರಂಗವಾಗಿದೆ.

    ಇದನ್ನೂ ಓದಿ: ಬಯೋಪಿಕ್ ಮಾಡಲ್ಲ; ಹಣ ಹಿಂದಿರುಗಿಸಪ್ಪಾ ಪ್ರತಾಪ್​

    ಇತ್ತ ಕೆಲ ಮೂಲಗಳ ಪ್ರಕಾರ ಮಹಾಭಾರತ ಚಿತ್ರಕ್ಕಾಗಿ ಆಮೀರ್ ಖಾನ್​ ಮತ್ತು ತಂಡ ಬಿಜಿಯಾಗಿದೆ. ಇದೀಗ ಬಂದ ಸುದ್ದಿ ಏನೆಂದರೆ, ನೆಟ್​ಫ್ಲಿಕ್ಸ್​ನಲ್ಲಿ ಈ ಚಿತ್ರವನ್ನು ಕಂತುಗಳ ರೀತಿಯಲ್ಲಿ ಸಿದ್ಧಪಡಿಸಿ ಬಿಡುಗಡೆ ಮಾಡುವ ಯೋಜನೆ ರೂಪುಗೊಂಡಿದ್ದು, ನೆಟ್​ಫ್ಲಿಕ್ಸ್ ಸಹ ನಿರ್ಮಾಣದಲ್ಲಿ ಕೈ ಜೋಡಿಸಲಿದೆಯಂತೆ. ಭಾರತದ ಅತಿ ದೊಡ್ಡ ಪ್ರಾಜೆಕ್ಟ್​ಗಳಲ್ಲಿ ಇದೂ ಒಂದಾಗಿರಲಿದೆ.

    ಇದನ್ನೂ ಓದಿ: PHOTO: ಸಾಮಾಜಿಕ ಜಾಲತಾಣದಲ್ಲಿ ಸ್ತನ ಪ್ರದರ್ಶಿಸಿದ ನಟಿ!; ನೆಟ್ಟಿಗರ ಕಟುಮಾತಿಗೆ ನೊಂದು ಈ ನಿರ್ಧಾರ…

    ಹಾಲಿವುಡ್​ನಲ್ಲಿ ಗೇಮ್​ ಆಫ್ ಥ್ರೋನ್ಸ್ ಕಳೆದ 10 ವರ್ಷಗಳಿಂದ ಹೊಸ ಸೀಸನ್​ಗಳನ್ನು ಹೊತ್ತು ಬರುತ್ತಲಿದೆ. ಈ ವರೆಗೂ ಎಂಟು ಸೀಸನ್​ಗಳು ಬಿಡುಗಡೆಯಾಗಿವೆ. ಅದೇ ರೀತಿಯಲ್ಲಿ ಮಹಾಭಾರತವನ್ನು ಸೃಷ್ಟಿಮಾಡುವ ಲೆಕ್ಕಾಚಾರ ಆಮೀರ್ ಖಾನ್​ ಅವರದ್ದು.​ ಈಗಾಗಲೇ ಈ ಬಗ್ಗೆ ಚರ್ಚೆಗಳು ನಡೆದಿದ್ದು, ಬಜೆಟ್​ ವಿಚಾರವು ಅಷ್ಟೇ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಎಷ್ಟು ಸೀಸನ್​ ಎಂಬುದು ಬಹಿರಂಗವಾಗಿಲ್ಲ. ಕರೊನಾ ಲಾಕ್​ಡೌನ್​ ಮುಗಿದ ಬಳಿಕ ಈ ಸರಣಿಯ ಬಗ್ಗೆ ಮತ್ತಷ್ಟು ವಿಚಾರಗಳು ಹೊರಬರಲಿವೆ. (ಏಜೆನ್ಸೀಸ್​)

    ಸುಶಾಂತ್​ಗಿತ್ತು ವಿಚಿತ್ರ ಕಾಯಿಲೆ; ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಸೈಕಿಯಾಟ್ರಿಸ್ಟ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts