70 ವರ್ಷದ ಮುದುಕಿಯ ಮೇಲೂ ಅತ್ಯಾಚಾರ; ಕೋಲಿನಿಂದ ಚುಚ್ಚಿ ವಿಕೃತಿ ಮೆರೆದ ಪಾಪಿಗಳು

Rape Victim 17 MAR 20
Published on

ಭೋಪಾಲ್​: ಕಾಮುಕರ ಕಣ್ಣಿನಿಂದ ಕೇವಲ ಯುವತಿಯರಷ್ಟೇ ಅಲ್ಲ, ಪುಟ್ಟ ಬಾಲಕಿಯರು, ವೃದ್ಧೆಯರೂ ಕೂಡ ಸುರಕ್ಷಿತರಲ್ಲ ಎನ್ನುವುದು ಪದೇಪದೆ ಸಾಬೀತಾಗುತ್ತಲೇ ಇದೆ. ಅದಕ್ಕೆ ಸಾಕ್ಷಿಯೆನ್ನುವಂತೆ ಮಧ್ಯಪ್ರದೇಶದ ವಿದೀಶ ಜಿಲ್ಲೆಯ ಒಲ್ಲಿಜಾ ಗ್ರಾಮದಲ್ಲಿ ಕೃತ್ಯವೊಂದು ನಡೆದಿದೆ.

ಆಕೆ 70 ವರ್ಷದ ವೃದ್ಧೆ. ತನ್ನ ಮಕ್ಕಳು ಗೇಣಿಗೆ ತೆಗೆದುಕೊಂಡಿದ್ದ ಜಮೀನಿನಲ್ಲಿ ಬೆಳೆ ಬೆಳೆಯುವ ಹುಮ್ಮಸ್ಸಿನಲ್ಲಿದ್ದ ಆಕೆ, ಇತ್ತೀಚೆಗೆ ಜಮೀನಿಗೆ ಹೆಚ್ಚಾಗಿ ಭೇಟಿ ಕೊಡುತ್ತಿದ್ದಳು. ಕೆಲ ದಿನಗಳಲ್ಲಿ ಬಿತ್ತನೆ ಮಾಡಬೇಕಿದ್ದ ಹಿನ್ನೆಲೆಯಲ್ಲಿ ಹೊಲಕ್ಕೆ ನೀರು ಹಾಯಿಸುವ ಕೆಲಸ ಮಾಡಲಾಗುತ್ತಿತ್ತು. ಅದರ ಮೇಲುಸ್ತುವಾರಿಯನ್ನು ಆಕೆಯೇ ಹೊತ್ತು ನಡೆಸುತ್ತಿದ್ದಳು. ಆದರೆ ಬುಧವಾರ ಇದೇ ಕೆಲಸಕ್ಕೆಂದು ಹೊಲಕ್ಕೆ ಹೊರಟ ವೃದ್ಧೆ ದುರಂತ ಅಂತ್ಯ ಕಂಡಿದ್ದಾಳೆ.

ಯಾರೋ ದುಷ್ಕರ್ಮಿಗಳು ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಕೆಯ ಬಾಯಿಗೆ ಮಣ್ಣು ತುಂಬಿದ್ದಾರೆ. ಗುಪ್ತಾಂಗಕ್ಕೆ ಕೋಲು ಚುಚ್ಚಿದ್ದಾರೆ. ಕೊನೆಗೆ ಆಕೆಯ ಉಸಿರನ್ನೇ ನಿಲ್ಲಿಸಿ ಓಡಿ ಹೋಗಿದ್ದಾರೆ.

ನಗ್ನವಾಗಿದ್ದ ದೇಹವನ್ನು ಕಂಡ ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ಮತ್ತು ಆಕೆಯ ಮನೆಯವರಿಗೆ ತಿಳಿಸಿದ್ದಾರೆ. ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net