ಅಪಘಾತಕ್ಕೆ ಯುವ ಉದ್ಯಮಿ ಬಲಿ : ಉಜಿರೆಯಲ್ಲಿ ಮುಂಜಾನೆ ಸಂಭವಿಸಿದ ಘಟನೆ

accident
ಅಪಘಾತ ನಡೆದ ಸ್ಥಳ
Published on

ಬೆಳ್ತಂಗಡಿ: ಉಜಿರೆಯ ಬೆಳಾಲ್ ಕ್ರಾಸ್ ಬಳಿ ಶನಿವಾರ ಮುಂಜಾನೆ ಬೆಂಜ್ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಚಾಲಕ, ಯುವ ಉದ್ಯಮಿ ಪ್ರಜ್ವಲ್ ನಾಯಕ್(36) ವಿಧಿವಶರಾಗಿದ್ದಾರೆ.

ಅಪಘಾತದಲ್ಲಿ ನಿಧನ ಹೊಂದಿದ ವಾಹನ ಸವಾರರನ್ನು ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರಾದ ಪ್ರಮೋದ್ ಆರ್.ನಾಯಕ್ ಅವರ ಪುತ್ರ ಪ್ರಜ್ವಲ್ ನಾಯಕ್ ಎಂದು ಗುರುತಿಸಲಾಗಿದೆ. ಪ್ರಜ್ವಲ್ ಉಜಿರೆಯ ಡಿ.ಎಂ.ಗೌಡ ಕಾಂಪ್ಲೆಕ್ಸ್‌ನಲ್ಲಿ ಗೇಮಿಂಗ್ ಶಾಪ್ ಮಾಲೀಕ ಹಾಗೂ ಉದ್ಯಮಿಯಾಗಿದ್ದು ಅಲ್ಲಿಗೆ ಹೋಗುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net