ಆಭರಣ ತೊಳೆದುಕೊಡುವ ನೆಪದಲ್ಲಿ ವಂಚನೆ 45 ಗ್ರಾಂ ಬಂಗಾರ ಕಳೆದುಕೊಂಡ ಮಹಿಳೆ

roobed-l
Published on

ಹುಬ್ಬಳ್ಳಿ: ಆಭರಣ ತೊಳೆದುಕೊಡುವ ನೆಪದಲ್ಲಿ ಕೇಶ್ವಾಪುರ ಅಂಬಿಕಾನಗರದ ಬುಳಗಣ್ಣವರ ವಸತಿ ಸಂಕೀರ್ಣಕ್ಕೆ ಆಗಮಿಸಿದ ವಂಚಕರಿಬ್ಬರು, ಮಹಿಳೆಯೊಬ್ಬರಿಗೆ ವಂಚಿಸಿ 1.80 ಲಕ್ಷ ರೂ. ಮೌಲ್ಯದ 45 ಗ್ರಾಂ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಇಬ್ಬರು ಬಂದು ಆಭರಣ ತೊಳೆದುಕೊಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ, 30 ಗ್ರಾಂ ಬಂಗಾರ ಸರ, 10 ಗ್ರಾಂ ಎರಡು ಜತೆ ಕಿವಿಯೋಲೆ ಸೇರಿ ಇತರ ಆಭರಣ ನೀಡಿದ್ದಾರೆ.

ಬಿಸಿ ನೀರು ತರಿಸಿಕೊಂಡು ತೊಳೆಯುವ ರೀತಿ ನಾಟಕ ಮಾಡಿದ್ದಾರೆ. ಬಳಿಕ ಮತ್ತೆ ಬಿಸಿ ನೀರು ತಂದುಕೊಡಿ ಎಂದು ಮಹಿಳೆಗೆ ಹೇಳಿ ಮನೆಯೊಳಗೆ ಕಳುಹಿಸಿ ಬಂಗಾರ ದೋಚಿಕೊಂಡು ಪರಾರಿಯಾಗಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net