More

    ಅರಣ್ಯಾಧಿಕಾರಿಗಳ ಎದುರು ಮಹಿಳೆ ಆತ್ಮಹತ್ಯೆ ಯತ್ನ

    ಹೊಸನಗರ: ತಾಲೂಕಿನ ಬೇಳೂರು ಗ್ರಾಮದಲ್ಲಿ ಶುಕ್ರವಾರ ನಗರ ವಲಯ ಅರಣ್ಯ ಅಧಿಕಾರಿಗಳು ಅಕ್ರಮವಾಗಿ ನಿರ್ವಿುಸಿದ್ದ ಗುಡಿಸಲು ತೆರವು ಮಾಡಲು ಮುಂದಾದಾಗ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಬೇಳೂರು ಗ್ರಾಮದ ಸರ್ವೆ ನಂ.74 ಪಿಎಫ್ ಆಗಿದ್ದು ರಮೇಶ್ ಎಂಬಾತ ವಾಸಿಸಲು ಮನೆ ಇಲ್ಲದ ಕಾರಣ ಗುಡಿಸಲು ಕಟ್ಟಿಕೊಂಡಿದ್ದರು. ಆದರೆ ಅದು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಕಾರಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ ಇದನ್ನು ರಮೇಶ್ ಕುಟುಂಬ ವಿರೋಧಿಸಿದೆ. ಅಲ್ಲದೆ ರಮೇಶ್ ಪತ್ನಿ ಕವಿತಾ (37) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೆ ಅಧಿಕಾರಿಗಳು ಕವಿತಾರನ್ನು ನಗರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಡ ಕುಟುಂಬದ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ನಗರ ಹೋಬಳಿಯ ಗ್ರಾಮಸ್ಥರು ಅರಣ್ಯ ಇಲಾಖೆ ಮುಂಭಾಗ ಪ್ರತಿಭಟಿಸಿ ಧಿಕ್ಕಾರ ಕೂಗಿದರು. ಪ್ರಮುಖ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕರುಣಾಕರ ಶೆಟ್ಟಿ, ಬಡ ಕುಟುಂಬದ ಹಿತರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕು ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ಅರಣ್ಯಾಧಿಕಾರಿ ಸಂಜಯ್, ಬಡ ಕುಟುಂಬದ ಮೇಲೆ ಯಾವುದೇ ದೌರ್ಜನ್ಯ ನಡೆಸಿಲ್ಲ. ಈ ಹಿಂದೆ ಕೂಡ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಮಹಿಳೆ ವಿಷ ಕುಡಿಯುತ್ತಿದ್ದಂತೆ ಕೂಡಲೆ ನಮ್ಮ ವಾಹನದಲ್ಲೇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಕೂಡ ಮುತುವರ್ಜಿ ತೋರಲಾಗಿದೆ. ಜನರ ಬೇಡಿಕೆ ಬಗ್ಗೆ ಮೇಲಧಿಕಾರಿ ಜತೆ ರ್ಚಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಪ್ರಮುಖರಾದ ಸುಮಾ ಸುಬ್ರಹ್ಮಣ್ಯ, ರಮೇಶ ಹಲಸಿನಹಳ್ಳಿ, ಸತೀಶ ಪಟೇಲ್, ಪ್ರಕಾಶ ಮಳಲಿ, ಪವನ ಕುಮಾರ್, ವಿಶ್ವನಾಥ, ಕಿಶೋರ, ಪಾಂಡು ಮಳಲಿ, ಚಂದ್ರು ದೋದೂರು ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts