ಯುವತಿ ಜತೆ ನನ್ನ ಗಂಡನಿಗಿದೆ ಅಕ್ರಮ ಸಂಬಂಧ! ಪತ್ನಿ ಮತ್ತು ಆಕೆ ನಡುವೆ ಜಾಲತಾಣದಲ್ಲೇ ನಡೀತು ವಾರ್​, ವಿಡಿಯೋ ವೈರಲ್​

crime
Published on

ಬೆಂಗಳೂರು: ಯುವತಿಯೊಬ್ಬಳು ನನ್ನ ಗಂಡನ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆಯೊಬ್ಬಳು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಜಾಲತಾಣದಲ್ಲೇ ಆಕೆ ಮತ್ತು ಯುವತಿ ಕಿತ್ತಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಡಿಯೋವೊಂದು ವೈರಲ್​ ಆಗಿದೆ.

ರಾಧಿಕಾ ಎಂಬಾಕೆಗೆ ರಾಮ್​ ಎಂಬಾತನ ಜತೆ ಕೆಲ ವರ್ಷಗಳ ಹಿಂದೆಯೇ ಮದುವೆ ಆಗಿದೆ. ದಂಪತಿ ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದಾರೆ. ಈ ನಡುವೆ ಪತ್ನಿ ಇದ್ದರೂ ರಾಮ್, ಪ್ರತೀಕಾಳನ್ನು ಪ್ರೀತಿಸುತ್ತಿದ್ದನಂತೆ. ಇದೇ ವಿಚಾರವಾಗಿ ರಾಧಿಕಾ ಮನೆಯಲ್ಲಿ ಜಗಳ ಮಾಡಿದ್ದಳು. ಅಷ್ಟೇ ಅಲ್ಲ, ಪ್ರತೀಕಾ ಮತ್ತು ರಾಧಿಕಾ ನಡುವೆಯೂ ಮಾತಿಗೆ ಮಾತು ಬೆಳೆದಿತ್ತು. ಇಷ್ಟೆಲ್ಲಾ ಆದ ಮೇಲೂ ರಾಮ್​ ಕರೆದನೆಂದು ಆತನ ಮನೆಗೆ ಪ್ರತೀಕಾ ಬಂದಿದ್ದು, ಈ ವೇಳೆ ಸಿಟ್ಟಿಗೆದ್ದ ರಾಮ್​, ಪ್ರತಿಕಾಳ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ರಾಧಿಕಾಳ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಜಾಲತಾಣದಲ್ಲೇ ರಾಧಿಕಾ v/s ಪ್ರತಿಕಾ ನಡುವೆ ಸಮರ ಶುರುವಾಗಿದೆ. ಗಂಡನ ಅಕ್ರಮ ಸಂಬಂಧದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೇ ಪತ್ನಿ ಚರ್ಚೆ ಮಾಡಿದ್ದಾಳೆ. ಮಾತಿಗೆ ಮಾತು ಎಂಬಂತೆ ರಾಧಿಕಾ-ಪ್ರತೀಕಾ ನಡುವೆ ವಾರ್​ ನಡೆದಿದೆ. 'ಇದು ಫೇಕ್ ವಿಡಿಯೋ, ಯಾರೂ ನಂಬಬೇಡಿ' ಎಂದು ಪ್ರತೀಕಾ ಕಮೆಂಟ್ ಮಾಡುತ್ತಿದ್ದಂತೆ, 'ಇದು ನಿಜವಾದ ವಿಡಿಯೋ. ನನ್ನ ಗಂಡನ ಜತೆ ಪ್ರತೀಕಾ ಸಂಬಂಧ ಹೊಂದಿದ್ದಾಳೆ' ಎಂದು ರಾಧಿಕಾ ಪ್ರತಿಕ್ರಿಯಿಸಿದ್ದಾಳೆ. ಸದ್ಯ ಇವರಿಬ್ಬರ ಚರ್ಚೆ ಫೇಸ್​ಬುಕ್​ನಲ್ಲಿ ಸಖತ್​ ವೈರಲ್​ ಆಗ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net