ಅತಿಥಿಯಾಗಿ ಬಂದು ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ ರಮೇಶ್​ ಅರವಿಂದ್​

Sankranthi Sambhrama 1
Published on

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ ಹಾಡುಗಳನ್ನು ಬಿಡುಗಡೆ ಮಾಡುವುದು ವಿಶೇಷವೇನಲ್ಲ. ಈಗ ಸಂಕ್ರಾಂತಿ ಸಂಭ್ರಮಕ್ಕೆ ಒಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ. ಒಂದಿಷ್ಟು ಸಂಗೀತಪ್ರಿಯರು ಸೇರಿ ಈ ಹಾಡನ್ನು ರೂಪಿಸಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಾದ ಈ ಹಾಡೇ ‘ಸಂಕ್ರಾಂತಿ ತಕಥೈ’. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಹರ್ಷಿಕಾ ಪೂಣಚ್ಚ, ರಾಧಿಕಾ ನಾರಾಯಣ್, ಪೃಥ್ವಿ ಅಂಬರ್ ಹಾಗೂ ತೆಲುಗಿನ ಮಾನಸ್ ನಗುಲಪಲ್ಲಿ, ಕೀರ್ತಿ ಭಟ್, ನಿಖಿಲ್ ಮಲಿಯಕ್ಕಳ್ ಹೆಜ್ಜೆ ಹಾಕಿದ್ದಾರೆ. ರಮೇಶ್ ಅರವಿಂದ್ ಅತಿಥಿಯಾಗಿ ಕಾಣಿಸಿಕೊಂಡಿರುವ ಈ ಹಾಡು, ಈಗಾಗಲೇ ಯೂಟ್ಯೂಬ್​ ರೆಡ್ ಸೀಡರ್ ಎಂಟಟೈನ್ಮೆಂಟ್ ಚಾನೆಲ್​ನಲ್ಲಿ ಹಾಡು ಬಿಡುಗಡೆಯಾಗಿದೆ.

ತೆಲುಗಿನ ಹಿರಿಯ ನೃತ್ಯ ನಿರ್ದೇಶಕಿ ಆನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ 'ಸಂಕ್ರಾಂತಿ ತಕಥೈ' ಹಾಡು ಮೂಡಿ ಬಂದಿದೆ. ಗಾಯಕಿ ಹಾಗೂ ‘ಎದೆ ತುಂಬಿ ಹಾಡುವೆನು' ಖ್ಯಾತಿಯ ಲಕ್ಷ್ಮೀ ಹೊಯ್ಸಳ ಹಾಗೂ ಶ್ರೀನಿವಾಸ್ ನಾಯಕ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಮಲಯಾಳಂ ಸಂಗೀತ ನಿರ್ದೇಶಕ ಅನೂಪ್ ಮೆನನ್ ಸಂಗೀತ ಸಂಯೋಜಿಸಿದ್ದು, ಅನೂಪ್ ಮೆನನ್ ಹಾಗೂ ಲಕ್ಷ್ಮೀ ಹೊಯ್ಸಳ ಹಾಡಿಗೆ ದನಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net