ತುಮಕೂರಲ್ಲಿ ಹಾಡಹಗಲೇ ಕುಡಿದ ಮತ್ತಿನಲ್ಲಿ ನಾಗರಹಾವನ್ನ ಕೈಗೆ ಸುತ್ತಿಕೊಂಡು ಓಡಾಡಿದ ಯುವಕ! ಮುಂದೇನಾಯ್ತು?

New Project(28)
Published on

ತುಮಕೂರು: ಇಲ್ಲೊಬ್ಬ ಯುವಕ ಕುಡಿದ ಮತ್ತಿನಲ್ಲಿ ನಾಗರಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ. 5 ಅಡಿ ಉದ್ದದ ಹಾವನ್ನು ಕೈಗೆ ಸುತ್ತಿಕೊಂಡು ಅರ್ಧ ಕಿಲೋ ಮೀಟರ್​ ದೂರದವರೆಗೂ ನಡೆದುಕೊಂಡೇ ಹೋಗಿದ್ದಾನೆ. ಕೈಗೆ ಹಾವು ಕಚ್ಚಿದರೂ ಬಿಡದೆ ಮೊಂಡಾಟ ತೋರಿದ್ದಾನೆ... ಈ ದೃಶ್ಯ ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಇಂತಹ ಘಟನರ ತುಮಕೂರಿನ ಶಿರಾಗೇಟ್​ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಹಾವನ್ನು ಹಿಡಿದು ಹುಚ್ಚಾಟ ಮೆರದ ಸಲೀಂ ಸದ್ಯ ಆಸ್ಪತ್ರೆಯಲ್ಲಿದ್ದಾನೆ. ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಸಲೀಂ, ಮಂಗಳವಾರ ಮಧ್ಯಾಹ್ನ ಶಿರಾಗೇಟ್​ ಬಳಿ ಹೋಗುತ್ತಿದ್ದ. ಈ ವೇಳೆ ನಾಗರಹಾವು ರಸ್ತೆ ದಾಟಿ ಹೋಗುತ್ತಿತ್ತು. ಅದರ ಹಿಂದೆ ಸಲೀಂ ಹೋಗಿದ್ದಾನೆ. ಹಾವು ಚರಂಡಿಯತ್ತ ಹೋದರೂ ಅದನ್ನು ಸಲೀಂ ಹಿಂಬಾಲಿಸಿಕೊಂಡೇ ಹೋಗಿ ಹಿಡಿದುಕೊಂಡು ಕೈಗೆ ಸುತ್ತಿಕೊಂಡು ತಿರುಗಾಡುತ್ತಿದ್ದ. ಈತನ ಕೈಗೆ ಕಚ್ಚಿದರೂ ಹಾವನ್ನ ಬಿಟ್ಟಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಉರಗ ರಕ್ಷಕ ದಿಲೀಪ್​, ಸಲೀಂನ ಕೈಯಿಂದ ಹಾವನ್ನು ಬಿಡಿಸಿ, ಈತನನ್ನು ಆಸ್ಪತ್ರೆಗೆ ಕಳಿಸಿದ್ದಾರೆ. ಅಷ್ಟೇ ಅಲ್ಲ, ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net