

ವಿಜಯವಾಣಿ ಸುದಿಜಾಲ ಬೈಂದೂರು
ಬಹುತೇಕ ಮಂದಿ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕೆಂದೇ ಬಯಸುತ್ತಾರೆ. ಸರ್ಕಾರಿ ವೃತ್ತಿಯಿಂದ ನಿವೃತ್ತರಾದರೂ ಬೈಂದೂರು ಗ್ರಾಮೀಣ ಭಾಗದ ಶಿಕ್ಷಕರಿಬ್ಬರು ತಮ್ಮೂರಿನ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಬೈಂದೂರಿನ ಬಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿ.ನಾಗೇಶ್, ಈಶ್ವರ ಶೇರುಗಾರ್ ಎಂಬುವರು ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ 3ನೇ ಮತ್ತು 5ನೇ ತರಗತಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಾರೆ. ಅವರ ಸೇವೆಗೆ ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಿ.ನಾಗೇಶ್ ಮೂಲತಃ ಬೈಂದೂರಿನವರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಒಂಬತ್ತು ವರ್ಷ ಹಾಗೂ ಶೃಂಗೇರಿಯಲ್ಲಿ 22 ವರ್ಷ ಸೇವೆ ಸಲ್ಲಿಸಿದ್ದಾರೆ. ಕುಗ್ರಾಮದ ಶಾಲೆಗೆ ಶಿಕ್ಷಕರಾಗಿ ಹೋದ ಟಿ.ನಾಗೇಶ್ ವಿದ್ಯಾರ್ಥಿಗಳ ದಾಖಲತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೂರೇ ವಿದ್ಯಾರ್ಥಿಗಳಿದ್ದ ಶಾಲೆಗೆ 40 ವಿದ್ಯಾರ್ಥಿಗಳು ಸೇರುವಂತೆ ವಾಡಿದ್ದು, ಆ ಭಾಗದ ಶಿಕ್ಷಣಾಭಿವಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಈಶ್ವರ ಶೇರುಗಾರ್ ಬೈಂದರೂಉ ಕ್ಷೇತ್ರ ಶಿಕಣಾಧಿಕಾರಿಗಳ ವ್ಯಾಪ್ತಿಯ ಅತ್ಯಾಡಿ ಮುಂತಾದ ಗ್ರಾಮೀಣ ಭಾಗದ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರು ಶಿಕ್ಷಕರು ನಿವೃತ್ತಿ ಬಳಿಕ ತಮ್ಮೂರಿಗೆ ಮರಳಿದ್ದಾರೆ. ಬಾಡ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತ ನಿವೃತ್ತಿ ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.