

ಮಂಜೇಶ್ವರ: ಯುವ ನಾಯಕತ್ವ ಸಂಘಟನೆಯ ಬೆಳವಣಿಗೆಯ ಸಂಕೇತ, ಆದರ್ಶ ಬಿ.ಎಂ.ರಂತಹ ವಿದ್ಯಾವಂತ, ವಾಗ್ಮಿ, ಸಂಘಟನಾ ಚತುರರು ಪಕ್ಷದ ಆಸ್ತಿ. ಅವರನ್ನು ಗುರುತಿಸಿ ಪಕ್ಷ ಕೇರಳದಲ್ಲೇ ಬಲಿಷ್ಠ ಮಂಡಲದ ಅಧ್ಯಕ್ಷ ಸ್ಥಾನ ನೀಡಿರುವುದು ಪಕ್ಷ ಸಂಘಟನೆಗೆ ಪೂರಕವಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ಹೇಳಿದರು.
ಹೊಸಂಗಡಿಪಲ್ಲಿ ಭಾನುವಾರ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ.ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ, ಮಾಜಿ ಅಧ್ಯಕ್ಷ ಕುಂಟಾರು ರವೀಶ್ ತಂತ್ರಿ, ವಿಜಯ್ ಕುಮಾರ್ ರೈ, ಎ.ಕೆ.ಕಯ್ಯರು ಉಪಸ್ಥಿತರಿದ್ದರು. ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು, ದೂಮಪ್ಪ ಶೆಟ್ಟಿ, ಹರಿಶ್ಚಂದ್ರ ಎಂ., ಲೋಕೇಶ್ ನೋಂಡ, ಸದಾಶಿವ ಚೇರಾಲ್, ಯಾದವ ಬಡಾಜೆ, ಪ್ರವೀಣ್ ಚಂದ್ರ ಬಲ್ಲಾಳ್, ಮಂಜುನಾಥ್ ಶೆಟ್ಟಿ, ಚಂದ್ರಾವತಿ ಶೆಟ್ಟಿ, ಜಯಲಕ್ಷ್ಮೀ ಭಟ್, ತುಳಸಿ ಕುಮಾರಿ ಪಸ್ಥಿತರಿದ್ದರು. ಯತಿರಾಜ್ ಶೆಟ್ಟಿ ಸ್ವಾಗತಿಸಿ, ಚಂದ್ರಹಾಸ ಪೂಜಾರಿ ವಂದಿಸಿದರು, ರವಿ ಮುಡಿಮಾರ್ ನಿರೂಪಿಸಿದರು.