

PM Modi: ವಿಜಯದಶಮಿಯ ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಂದು (ಅ. 2) ದೇಶದ ಜನತೆಗೆ ಶುಭಕೋರಿದ್ದು, ಜನರು ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮುಂದುವರೆಯಲು ಈ ಹಬ್ಬ ಸ್ಪೂರ್ತಿಯಾಗಲಿ ಎಂದು ಹಾರೈಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಶುಭಕೋರಿರುವ ಪ್ರಧಾನಿ ಮೋದಿ, ವಿಜಯದಶಮಿ ಕೆಟ್ಟದ್ದು ಮತ್ತು ಅಸತ್ಯದ ಮೇಲೆ ಒಳ್ಳೆಯ ಮತ್ತು ಸತ್ಯದ ವಿಜಯದ ಸಂಕೇತವಾಗಿದೆ. ಈ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರೂ ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯಲು ಸ್ಫೂರ್ತಿಯನ್ನು ಪಡೆಯಲಿ ಎಂಬುದು ನನ್ನ ಆಶಯ. ದೇಶಾದ್ಯಂತ ನನ್ನ ಕುಟುಂಬ ಸದಸ್ಯರಿಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹ ಎಕ್ಸ್ನಲ್ಲಿ ಶುಭಕೋರಿದ್ದು, ಸತ್ಯ, ನೀತಿವಂತ ಮಾರ್ಗ, ಮೌಲ್ಯಗಳು, ಉತ್ತಮ ನಡವಳಿಕೆ ಹಾಗೂ ಶಾಶ್ವತ ತತ್ವಗಳ ವಿಜಯದ ಪವಿತ್ರ ಸಂಕೇತವಾದ ವಿಜಯದಶಮಿಯ ಮಹಾ ಹಬ್ಬದಂದು ರಾಜ್ಯದ ಎಲ್ಲಾ ಭಕ್ತರು ಮತ್ತು ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಗವಾನ್ ಶ್ರೀ ರಾಮನ ಕೃಪೆಯಿಂದ ಪ್ರತಿಯೊಂದು ಹೃದಯವೂ ಸದಾಚಾರ ಮತ್ತು ಸತ್ಯದ ಬೆಳಕಿನಿಂದ ಬೆಳಗಲಿ ಎಂದು ಹೇಳಿದ್ದಾರೆ. (ಏಜೆನ್ಸೀಸ್)