ಸಿಬ್ಬಂದಿ ಸಮಯ ಪ್ರಜ್ಞೆ ತಪ್ಪಿದ ದುರಂತ

ankola-train
Published on

ಅಂಕೋಲಾ : ರೈಲ್ವೆ ಸಿಬ್ಬಂದಿಯೋರ್ವರ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯಿಂದ ಸಂಬವಿಸಬಹು ದಾದ ಭಾರೀ ರೈಲು ದುರಂತವೊAದು ತಪ್ಪಿದ ಘಟನೆ ತಾಲೂಕಿನ ಹಾರವಾಡ ರೈಲ್ವೆ ಸ್ಟೇಶನ್ ವ್ಯಾಪ್ತಿ ಯಲ್ಲಿ ಮಂಗಳವಾರ ಬೆಳಗಿನ ಜಾವದಲ್ಲಿ ನಡೆದಿದೆ.
ಹಾರವಾಡ ಸ್ಟೇಶನ್ ಸೀನಿಯರ ಟ್ರ‍್ಯಾಕ್ ಮ್ಯಾನ್ ಚತ್ರಪತಿ ಆನಂದು ಗೌಡ ಇವರ ಕರ್ತವ್ಯ ಮತ್ತು ಸಮಯ ಪ್ರಜ್ಞೆಗೆ ರೈಲು ಅಧಿಕಾರಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಿನ 4.49 ಗಂಟೆಗೆ ತಾಂತ್ರಿಕ ದೋಷದಿಂದ ರೈಲು ಹಳಿಯ ಜಾಯಿಂಟ್ ತುಂಡಾಗಿರುವದನ್ನು ಗಮನಿಸಿದ ಛತ್ರಪತಿ ಕೂಡಲೇ ಸ್ಟೇಶನ್ ಮಾಸ್ಟರ್ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಮೂಲಕ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ ಮಡಗಾಂವ ವಿಭಾಗೀಯ ಹಿರಿಯ ಅಧಿಕಾರಿಗಳಾದ ಎ.ಇ.ಎನ್ ಹಾರವಾಡಕ್ಕೆ ಆಗಮಿಸಿ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರವಾರ ಎಸ್‌ಎಸ್‌ಇ ಶೇಷಗಿರಿ, ಕುಮಟಾ ಸ್ಟೇಶನ್ ಜೆ.ಇ.ಪಂಕಜ, ಹಾರವಾಡ ಸ್ಟೇಶನ್ ಮಾಸ್ಟರ್ ಶೆಟ್ಟಿ, ಹಾರವಾಡ ಸ್ಟೇಶನ್ ಆಪರೇಟಿಂಗ್, ಎಂಜಿನೀಯರಿAಗ್ ಸಿಬ್ಬಂದಿಗಳು, ಸಿಗ್ನಲ ಮ್ಯಾನಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net