More

    ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಶೇ.55.54 ಮಂದಿ ಪಾಸ್​

    ಬೆಂಗಳೂರು: ಸೆ.27 ಮತ್ತು 29ರಂದು ನಡೆದಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು (ಅ.11) ಪ್ರಕಟವಾಗಿದ್ದು, ಶೇ.55.54 ಫಲಿತಾಂಶ ಬಂದಿದೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬೆಳಗ್ಗೆ 10ಕ್ಕೆ ಫಲಿತಾಂಶ ಬಿಡುಗಡೆ ಮಾಡಿದರು. ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ 625ಕ್ಕೆ 599ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಗ್ರೀಷ್ಮಾ ನಾಯಕ್​ಗೆ ಶುಲ್ಕ ಕಟ್ಟಿಲ್ಲವೆಂದು ಪರೀಕ್ಷೆ ನೀಡಿರಲಿಲ್ಲ. ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಬಾಲಕಿ ಮನೆಗೆ ಭೇಟಿ ನೀಡಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದರು ಎಂದು ಸಚಿವ ನಾಗೇಶ್​ ವಿವರಿಸಿದರು.

    ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 53,155 ವಿದ್ಯಾರ್ಥಿಗಳಲ್ಲಿ 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.55.54 ಫಲಿತಾಂಶ ದಾಖಲಾಗಿದೆ. 19,232 ಬಾಲಕರು ಪಾಸ್ ಆಗಿದ್ದಾರೆ (54.66%). 10,290 ಬಾಲಕಿಯರು ಪಾಸ್ ಆಗಿದ್ದಾರೆ-(57.25%). ಇಂದು ಮಧ್ಯಾಹ್ನ 3 ಗಂಟೆ ಬಳಿಕ https://sslc.karnataka.gov.in/ ವೆಬ್‌ಸೈಟ್‌ನಲ್ಲಿ ತಾತ್ಕಾಲಿಕ ಅಂಕಪಟ್ಟಿ ನೋಡಬಹುದು. http://karresults.nic.in ನಲ್ಲಿ ಫಲಿತಾಂಶ ಲಭ್ಯವಿದೆ. ಇಂದು ಮಧ್ಯಾಹ್ನ 3 ಗಂಟೆಗೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್​ ನಂಬರ್​ಗೆ ಎಸ್​ಎಂಎಸ್​ ಮೂಲಕ ಫಲಿತಾಂಶ ಹೋಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ ಇದ್ದರು.

    ಥೂ, ಇವನೆಂಥಾ ಕಾಮುಕ? ಯುವಕನ ಮೇಲೇ ರೇಪ್​!

    ಮದ್ವೆಯಾದ 6 ತಿಂಗಳಿಗೆ ಯುವತಿ ದುರಂತ ಸಾವು: ಗಂಡನಿಗೆ ಹಣದಾಹ, ಮೈದುನನಿಗೆ ಕಾಮದಾಹ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts